You cannot copy content of this page.
. . .

   ಈಗ ನಮ್ಮ ಬ್ಯಾಂಕ್‍ ಖಾತೆಗೆ ನಗದು ಜಮೆ ಮಾಡಬೇಕೆಂದರೆ ಯಾವ ಬ್ಯಾಂಕ್‍ ನಲ್ಲಿ ಖಾತೆ ಹೊಂದಿದ್ದೇವೆಯೋ ಅದೇ ಬ್ಯಾಂಕ್‍ ಗೆ ಸೇರಿದ ಹಣ ಪಾವತಿ ಯಂತ್ರವನ್ನು ಹುಡುಕಿಕೊಂಡು ಹೋಗಬೇಕು. ಆದರೆ ಇನ್ಮುಂದೆ ಆ ಸಂಕಷ್ಟ ಇರುವುದಿಲ್ಲ. ಯಾವುದೇ ಬ್ಯಾಂಕಿನ ಹಣ ಜಮೆ ಮಾಡುವ ಯಂತ್ರದಲ್ಲೂ ಹಣ ಜಮೆ ಮಾಡೋದಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಸಮೀಪದ ಯಾವುದೇ ಬ್ಯಾಂಕ್‌ ಶಾಖೆಗಳು ಅಥವಾ ಎಟಿಎಂಗಳಲ್ಲಿರುವ ಹಣ ಜಮೆ ಮಾಡುವ ಯಂತ್ರಗಳಲ್ಲಿ ಯಾವುದೇ ಬ್ಯಾಂಕಿನ ಗ್ರಾಹಕರಾದರೂ ಹಣ ಕಟ್ಟುವ ಅವಕಾಶ ಇದು.

  ಇಂಥ ಹೊಸ ವಿಧಾನವನ್ನು ಪರಿಚಯಿಸಲು ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ(ಎನ್‌ಪಿಸಿಐ) ಮುಂದಾಗಿದೆ. ಈ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪ್ರಮುಖ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ‌ಗಳಿಗೆ ಸೂಚಿಸಿದೆ.  ನ್ಯಾಷನಲ್‌ ಫೈನಾನ್ಸ್‌ ಸ್ವಿಚ್‌(ಎನ್‌ಎಫ್‌ಎಸ್‌) ವ್ಯವಸ್ಥೆ ಬಳಸಿ ಉದ್ದೇಶಿತ ಸೇವೆಯನ್ನು ನೀಡಬಹುದಾಗಿದೆ. ಇದರಿಂದ ಬ್ಯಾಂಕಿಂಗ್‍ ಸೇವೆಯಲ್ಲಿ ಕರೆನ್ಸಿ ನಿರ್ವಹಣೆಯ ವೆಚ್ಚವು ಗಣನೀಯವಾಗಿ ತಗ್ಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

 

%d bloggers like this: