You cannot copy content of this page.
. . .

ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಪಡೆಯಲು ಸಿದ್ಧ: ಸೇನಾ ಮುಖ್ಯಸ್ಥ

  ಕೇಂದ್ರ ಸರ್ಕಾರ ಆದೇಶ ನೀಡಿದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆಯಲು ನಾವು ಸಿದ್ಧವಿದ್ದೇವೆ ಎಂದು ಸೇನಾ ಮುಖ್ಯಸ್ಥ ಮುಕುಂದ್ ನರವಾಣೆ ತಿಳಿಸಿದ್ದಾರೆ. ಪಿಒಕೆಯನ್ನು ವಶಪಡಿಸಿಕೊಳ್ಳಲು ಭಾರತೀಯ ಸೇನೆ ಸಿದ್ಧವಿದೆ. ಸಂಸತ್ ಅದನ್ನು ಬಯಸಿದರೆ ಪಿಒಕೆಯೂ ನಮಗೆ ಸೇರಬೇಕು. ಈ ನಿಟ್ಟಿನಲ್ಲಿ ಆದೇಶ ಬಂದರೆ ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

  ರಕ್ಷಣಾ ಪಡೆ ಮುಖ್ಯಸ್ಥರ ಹುದ್ದೆ ರಚನೆ ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಗಳನ್ನು ಸ್ಥಾಪಿಸಿರುವುದು ಭಾರತೀಯ ಸೇನೆಯೊಳಗೆ ಸಮನ್ವಯತೆ ವಿಚಾರದಲ್ಲಿ ಬಹಳ ದೊಡ್ಡ ಹೆಜ್ಜೆಯಾಗಿದೆ. ಸೇನೆಯೊಳಗೆ ಸಮನ್ವಯತೆ ಮತ್ತು ಸಂಯೋಜಿತ ಸಮರ ಪಡೆ ಅದಕ್ಕೊಂದು ಉದಾಹರಣೆಯಷ್ಟೆ. ಈ ಸಮನ್ವಯತೆ ಅಥವಾ ಸಂಯೋಜನೆ ಪ್ರಕ್ರಿಯೆಯಲ್ಲಿ ನಾವು ಪ್ರತಿಯೊಬ್ಬರನ್ನೂ ಕರೆದುಕೊಂಡು ಮುಂದೆ ಹೋಗುತ್ತೇವೆ. ಯಾರನ್ನೂ ಹಿಂದೆ ಬಿಡುವುದಿಲ್ಲ ಎಂದು ಮುಕುಂದ್ ನರವಾಣೆ ಇದೇ ವೇಳೆ ತಿಳಿಸಿದರು.

 

%d bloggers like this: