You cannot copy content of this page.
. . .

ಮೈಸೂರಲ್ಲಿ ಮೊದಲ ವಿಶೇಷ ಚೇತನರ ಅಧ್ಯಯನ ಕೇಂದ್ರ

    ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ದೆಹಲಿಯ ಉನ್ನತ ಶಿಕ್ಷಣ ಸಂಸ್ಥೆ ವತಿಯಿಂದ ರಾಜ್ಯದಲ್ಲೇ ಮೊದಲ ಬಾರಿಗೆ ವಿಶೇಷಚೇತನ ವಿದ್ಯಾರ್ಥಿಗಳಿಗಾಗಿ ‘ಅಂಗವೈಕಲ್ಯ ಮತ್ತು ಪುನರ್ವಸತಿ ಅಧ್ಯಯನ ಕೇಂದ್ರ’ವನ್ನು ಮೈಸೂರಿನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.

   ಇಂದು (ಬುಧವಾರ) ಮೈಸೂರು ವಿವಿಯ ಕ್ರಾಫಡ್ ಭವನದಲ್ಲಿ ನಡೆದ ಸಿಂಡಿಕೇಟ್ 2ನೇ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ವಿವಿಯ ಧನಸಹಾಯ ಆಯೋಗದ ನಿದೇರ್ಶನದಂತೆ ಡೀನ್‍ ಗಳ ಸಮಿತಿ ಸಭೆಯಲ್ಲಿ ಚರ್ಚಿಸಿ ದೈಹಿಕ ಶಿಕ್ಷಣ ವಿಭಾಗದಲ್ಲಿ ‘ಅಂಗವೈಕಲ್ಯ ಮತ್ತು ಪುನರ್ವಸತಿ ಅಧ್ಯಯನ ಇಲಾಖೆ ಎಂಬ ವಿಭಾಗ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಅಂಗವೈಕಲ್ಯ ಅಧ್ಯಯನ ವಿಭಾಗವು ಅಂತರ ಶಿಕ್ಷಣ ನೀಡುವ ವಿಭಾಗವಾಗಿದ್ದು, ಈಗಾಗಲೇ ಯುರೋಪ್ ಸೇರಿದಂತೆ ಹಲವು ದೇಶಗಳಲ್ಲಿ ಈ ವಿಭಾಗ ಹೆಚ್ಚು ಪ್ರಸ್ತಿದ್ಧಿ ಪಡೆದಿದೆ. ಇದೀಗ ಕರ್ನಾಟಕದಲ್ಲಿ ಇದೇ ಮೊದಲಬಾರಿಗೆ ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಿಗೆ ಅರ್ಹ ವಿಶೇಷ ಚೇತನರು ಅರ್ಜಿ ಸಲ್ಲಿಸುವಂತೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಪ್ರೊ.ಜಿ.ಹೇಮಂತಕುಮಾರ್ ಹೇಳಿದ್ದಾರೆ.

 

%d bloggers like this: