You cannot copy content of this page.
. . .

ಪಶುವೈದ್ಯೆಯ ಮೊಬೈಲ್ ಮುಚ್ಚಿಟ್ಟಿದ್ದ ಆರೋಪಿಗಳು; ಪೊಲೀಸ್‍ ಆಯುಕ್ತ ವಿಶ್ವನಾಥ್

ಹೈದರಾಬಾದ್‍ ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಎನ್‍ ಕೌಂಟರ್‍ ಮಾಡಿದ್ದಕ್ಕೆ ಸೈಬರಾಬಾದ್‍ ಪೊಲೀಸ್‍ ಆಯುಕ್ತ ವಿಶ್ವನಾಥ್‍ ಸಜ್ಜನರ್‍ ಕಾರಣ ನೀಡಿದ್ದಾರೆ.

  ಘಟನೆ ನಡೆದ ಸ್ಥಳದಲ್ಲೇ ಸುದ್ದಿಗೋಷ್ಠಿ ನಡೆಸಿದ ವಿಶ್ವನಾಥ್‍, ಮೊದಲ ದಿನದ ವಿಚಾರಣೆಯಲ್ಲೇ ಪ್ರಮುಖ ಸಾಕ್ಷ್ಯ ಸಿಕ್ಕಿತ್ತು. ಆರೋಪಿಗಳು ಹತ್ಯೆಯಾದ ಪಶು ವೈದ್ಯೆಯ ಮೊಬೈಲ್‍ ಫೋನ್, ವಾಚ್‍, ಪವರ್‍ ಬ್ಯಾಂಕ್ ಬಚ್ಚಿಟ್ಟಿದ್ದರು.

ಅದನ್ನು ವಶಕ್ಕೆ ಪಡೆಯಲು ಸ್ಥಳಕ್ಕೆ ಹೋಗಿದ್ದೆವು. ವಸ್ತುಗಳನ್ನು ವಶಪಡಿಸಿಕೊಂಡ ಮೇಲೆ ಆರೋಪಿಗಳುಪೊಲೀಸರ ಮೇಲೆ ಹಲ್ಲೆಗೆ ಮುಂದಾದರು. ಕಲ್ಲು ತೂರಿ ಪರಾರಿಯಾಗಲು ಯತ್ನಿಸಿದರು. ಆಗ ನಾವು ಫೈರಿಂಗ್‍ ಮಾಡಬೇಕಾಯಿತು ಎಂದು ವಿಶ್ವನಾಥ್‍ ಅವರು ಹೇಳಿದ್ದಾರೆ. ಬೆಳಗ್ಗೆ 5.30 ರಿಂದ 6.15ರ ಅಂತರದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 

%d bloggers like this: