You cannot copy content of this page.
. . .

    ಆಕ್ರಮಿಸಿಕೊಂಡಿರೋ ಕಾಶ್ಮೀರದ ಪ್ರಾಂತ್ಯಗಳನ್ನೇ ಪಾಕ್‍ ಬಿಟ್ಟುಕೊಡುತ್ತಿಲ್ಲ. ಇನ್ನು ಇಡೀ ಪಾಕಿಸ್ತಾನ ಅದ್ಹೇಗೆ ಭಾರತದ ಅವಿಭಾಜ್ಯ ಅಂಗ ಆಗುತ್ತೆ..?. ಈ ಪ್ರಶ್ನೆ ಏನೋ ನಿಜ. ಯಾಕಂದ್ರೆ ಈ ಸುದ್ದಿ ಪಾಕಿಸ್ತಾನ ದೇಶಕ್ಕೆ ಸಂಬಂಧಿಸಿದ್ದಲ್ಲ. ಭಾರತದಲ್ಲೇ ಇರೋ ಪಾಕಿಸ್ತಾನ ಅನ್ನೋ ಗ್ರಾಮಕ್ಕೆ ಸಂಬಂಧಿಸಿದ್ದು..! ಬಿಹಾರ ರಾಜ್ಯದ ಪೂರ್ನಿಯಾ ಜಿಲ್ಲೆಯಲ್ಲಿ ಪಾಕಿಸ್ತಾನ ಅನ್ನೋ ಪುಟ್ಟ ಗ್ರಾಮ ಇದೆ.. ಬಿಹಾರದಲ್ಲಿದ್ದ ಮೇಲೆ ಇದು ಭಾರತದ ಅವಿಭಾಜ್ಯ ಅಂಗವೇ ಅಲ್ಲವೇ..?

   ಕಾಶ್ಮೀರದಲ್ಲಿರುವ ಶ್ರೀನಗರ ಗೊತ್ತು.. ಅದೇ ತರ ಬಿಹಾರದಲ್ಲೂ ಒಂದು ಶ್ರೀನಗರ ಇದೆ.. ಆ ಶ್ರೀನಗರ ತಾಲ್ಲೂಕಿನಲ್ಲೇ ಈ ಪಾಕಿಸ್ತಾನ ಗ್ರಾಮ ಇರೋದು.. ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಸಮುದಾಯದ ಕುಟುಂಬವಿಲ್ಲ. ಗ್ರಾಮದಲ್ಲಿ ಇರೋದು ಬರೀ 150 ಮಂದಿ ಮಾತ್ರ. ಎಲ್ಲರೂ ಬಡಕಟ್ಟು ಜನಾಂಗದವರೇ. ಪಾಟ್ನಾದಿಂದ 375 ಕಿಲೋ ಮೀಟರ್‍ ದೂರದಲ್ಲಿರುವ ಈ ಗ್ರಾಮದ ಹೆಸರೇಳೋದಕ್ಕೇ ಇಲ್ಲಿನ ಜನ ಮುಜುಗರ ಪಡ್ತಾರೆ..   

   ಸ್ವಾತಂತ್ರ್ಯಕ್ಕೂ ಮೊದಲು ಈ ಗ್ರಾಮದಲ್ಲಿ ಪೂರ್ತಿ ಮುಸ್ಲಿಂ ಕುಟುಂಬಗಳು ವಾಸವಿದ್ದವು. ಹೀಗಾಗಿ ಅವರೇ ಈ ಹಳ್ಳಿಗೆ ಪಾಕಿಸ್ತಾನ ಎಂದು ಹೆಸರಿಟ್ಟುಕೊಂಡಿದ್ದರು.. ಆದ್ರೆ ದೇಶ ವಿಭಜನೆ ಸಂದರ್ಭದಲ್ಲಿ ಈ ಗ್ರಾಮದ ಮುಸ್ಲಿಮರೆಲ್ಲರೂ ಈಗಿನ ಬಾಂಗ್ಲಾದೇಶಕ್ಕೆ (ಆಗಿನ ಪೂರ್ವ ಪಾಕಿಸ್ತಾನ) ವಲಸೆ ಹೋದರು. ಈ ವೇಳೆ ಹತ್ತಿರದಲ್ಲೇ ಇದ್ದ ಬುಡಕಟ್ಟು ಜನಾಂಗದವರಿಗೆ ಭೂಮಿ ಹಾಗೂ ಮನೆಗಳನ್ನು ಕೊಟ್ಟು ಹೋದರು. ಆಗ ಅವರು ಒಂದೇ ಒಂದು ಷರತ್ತು ಹಾಕಿದ್ದರು. ಅದೇ ಗ್ರಾಮದ ಹೆಸರನ್ನು ಪಾಕಿಸ್ತಾನ ಎಂದೇ ಮುಂದುವರೆಸಬೇಕು ಅನ್ನೋದು. ಹೀಗಾಗಿ ಇಲ್ಲೀತನಕ ಇದು ಪಾಕಿಸ್ತಾನ ಹೆಸರಿನಲ್ಲೇ ಮುಂದುವರೆಯುತ್ತಿದೆ.

  ಆಧಾರ್‍ ಕಾರ್ಡ್‍, ರೇಷನ್‍ ಕಾರ್ಡ್‍ ಸೇರಿ ಎಲ್ಲಾ ದಾಖಲೆಗಳಲ್ಲಿ ಊರಿನ ಹೆಸರು ಪಾಕಿಸ್ತಾನ ಎಂದೇ ನಮೂದಾಗಿದೆ. ಹೀಗಾಗಿ ಹೊಸಬರು ಇದನ್ನು ವಿಚಿತ್ರವಾಗಿ ನೋಡುತ್ತಾರಂತೆ. ಜೊತೆಗೆ ಗ್ರಾಮದ ಜನಕ್ಕೆ ನಮ್ಮ ಊರು ಪಾಕಿಸ್ತಾನ ಎಂದು ಹೇಳೋದಕ್ಕೆ ಮುಜುಗರವಂತೆ. ಹೀಗಾಗಿ ಗ್ರಾಮದ ಹೆಸರನ್ನು ಬದಲಾಯಿಸಲು ಆಗ್ರಹಿಸುತ್ತಿದ್ದಾರೆ. ಬುಡಕಟ್ಟು ಜನಾಂಗದ ನಾಯಕರಾಗಿದ್ದ ಬಿರ್ಸಾ ಮುಂಡಾ ಅವರ ಜ್ಞಾಪಕಾರ್ಥ, ಬಿರ್ಸಾ ನಗರ ಎಂದು ನಾಮಕರಣ ಮಾಡುವಂತೆ ಕೇಳುತ್ತಿದ್ದಾರೆ.

 

%d bloggers like this: