ಹುಣಸೂರು ವಿಧಾನಸಭಾ ಕ್ಷೇತ್ರದ ಮಲ್ಲೇಗೌಡನಕೊಪ್ಪಲಿನಲ್ಲಿ ಪ್ರಚಾರದ ವೇಳೆ ಮಾಜಿ ಸಂಸದ ವಿಜಯ್ ಶಂಕರ್ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿತ್ತು. ಇದೀಗ ವಾಗ್ವಾದ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಶಂಕರ್ ಜೊತೆ ಗ್ರಾಮಸ್ಥರು ನಡೆಸಿದ ವಾಗ್ವಾದದ ದೃಶ್ಯಾವಳಿ ಹರಿದಾಡುತ್ತಿದೆ.
ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ವಿಜಯ್ ಶಂಕರ್ ಮಲ್ಲೇಗೌಡನ ಕೊಪ್ಪಲಿಗೆ ಆಗಮಿಸಿದ್ದರು. ಈ ವೇಳೆ ಗ್ರಾಮಸ್ಥರು ಊರಿನ ಮುಂಭಾಗದಲ್ಲೇ ತಡೆದರು. ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳು ಮಾಡದೇ ಇದ್ದುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಕ್ಕೆ ಬರದಂತೆ ತಡೆದರು. ಈ ವೇಳೆ ವಿಜಯ್ ಶಂಕರ್ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ವಿಜಯ್ ಶಂಕರ್ ಅಲ್ಲಿಂದ ಬೇರೆ ಗ್ರಾಮಕ್ಕೆ ತೆರಳಿದರು.