You cannot copy content of this page.
. . .

ಉಪಚುನಾವಣೆಯಲ್ಲಿ ಗೆದ್ದವರು ಮಾತ್ರ ಸಚಿವರಾಗುತ್ತಾರೆ, ಸೋತವರಲ್ಲ; ವಿ.ಶ್ರೀನಿವಾಸ ಪ್ರಸಾದ್ ಹೊಸ ಬಾಂಬ್

ಗೆದ್ದವರು ಮಾತ್ರ ಸಚಿವರಾಗುತ್ತಾರೆ, ಸೋತವರಲ್ಲ. ಉಪಚುನಾವಣೆಯಲ್ಲಿ ಸೋತವರಿಗೆ ಮಂತ್ರಿ ಸ್ಥಾನ ಇಲ್ಲ. ಅಡಗೂರು ಎಚ್‍.ವಿಶ್ವನಾಥ್‍ ಸೋತಿದ್ದಾರೆ. ಹೀಗಾಗಿ, ಅವರಿಗೆ ಮಂತ್ರಿ ಸ್ಥಾನ ಇಲ್ಲ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‍ ಹೊಸ ಬಾಂಬ್‍ ಸಿಡಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಸೋತವರು ಮಂತ್ರಿ ಆಗುವಂತಿಲ್ಲ ಎಂದು ಸುಪ್ರೀಂ ಕೋರ್ಟ್‍ ಉಲ್ಲೇಖಿಸಿದೆ. ಗೆದ್ದವರಿಗೆ ಮಂತ್ರಿ ಸ್ಥಾನ ನೀಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಅದರಂತೆ ಮಾಡುತ್ತಾರೆ. ಧನುರ್ಮಾಸದ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸ್ತಿಮಿತ ಕಳೆದುಕೊಂಡ ಡಿಕೆಶಿ

ಏಸು ಪ್ರತಿಮೆ ನಿರ್ಮಾಣ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿ.ಶ್ರೀನಿವಾಸ ಪ್ರಸಾದ್‍, ಡಿ.ಕೆ.ಶಿವಕುಮಾರ್‍ ಅವರು ಜೈಲಿಗೆ ಹೋಗಿ ಬಂದ ನಂತರ ಸ್ತಿಮಿತ ಕಳೆದುಕೊಂಡಿದ್ದಾರೆ ವಾಗ್ದಾಳಿ ನಡೆಸಿದ್ದಾರೆ. ಪ್ರತಿಮೆ ನಿರ್ಮಿಸುವ ಬದಲಾಗಿ ಆ ಸಮುದಾಯದ ಅಭಿವೃದ್ಧಿಗಾಗಿ ಹಣ ವಿನಿಯೋಗಿಸಿದರೆ ಉತ್ತಮ ಎಂದು ಹೇಳಿದ್ದಾರೆ.  

 

%d bloggers like this: