You cannot copy content of this page.
. . .

ಮೈಸೂರಿನಲ್ಲಿ ಇಬ್ಬರು ನಕಲಿ ವೈದ್ಯರು ಪೊಲೀಸರ ವಶಕ್ಕೆ

ಮೈಸೂರು: ವೈದ್ಯರೆಂದು ಹೇಳಿಕೊಂಡು ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಇಬ್ಬರು ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದ ಜಿಲ್ಲಾ ವೈದ್ಯಾಧಿಕಾರಿ ಡಾ.ವೆಂಕಟೇಶ್, ಆರೋಪಿಗಳನ್ನು ಪೊಲಿಸರ ವಶಕ್ಕೆ ಒಪ್ಪಿಸಿದ್ದಾರೆ.

ಹುಬ್ಬಳಿ ಮೂಲದ ವಿಜಯ್ ಕುಮಾರ್ ಹಾಗೂ ಧಾರವಾಡದ ದೇವೇಂದ್ರ ಎಂಬವರೇ ಬಂಧಿತ ನಕಲಿ ವೈದ್ಯರು. ಇವರು ಕಳೆದ ಕೆಲ ದಿನಗಳಿಂದ ನಕಲಿ ದಾಖಲಾತಿಗಳ ಮೂಲಕ ಇಲವಾಲದಲ್ಲಿ ಕ್ಲಿನಿಕ್ ನಡೆಸುತ್ತಿದ್ದರು.

ಇಲವಾಲದಲ್ಲಿ ದೇವೇಂದ್ರ ಎಂಬಾತ ಚಾಮುಂಡೇಶ್ವರಿ ಕ್ಲಿನಿಕ್ ನಡೆಸುತ್ತಿದ್ದನು. ಸಮೀಪದಲ್ಲಿಯೇ ದೇವೇಂದ್ರ ದಿವ್ಯಾಶ್ರೀ ಹೆಲ್ತ್ ಕೇರ್ ಎಂಬ ಕ್ಲಿನಿಕ್ ನಡೆಸುತ್ತಿದ್ದನು. ಈ ಸಂಬಂಧ ಕೆಲವರು ಅವರು ವೈದ್ಯರೇ, ಅಲ್ಲವೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಸಾರ್ವಜನಿಕರು ಜಿಲ್ಲಾ ವೈದ್ಯಾಧಿಕಾರಿ ಡಾ.ವೆಂಕಟೇಶ್ ಅವರಿಗೆ ಮಾಹಿತಿ ನೀಡಿದ್ದರು.

ಹೀಗಾಗಿ ವೆಂಕಟೇಶ್ ಅವರು ವೈದ್ಯರಾದ ಡಾ.ಸಿರಾಜ್, ಡಾ.ಉಮೇಶ್, ಡಾ.ಸೀತಾಲಕ್ಷ್ಮಿ ಅವರೊಂದಿಗೆ ಇಲವಾಲ ಪೊಲೀಸ್ ಠಾಣೆಯ ಪೊಲೀಸರ ಸಹಕಾರದೊಂದಿಗೆ ಗುರುವಾರ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಇಬ್ಬರೂ ನಕಲಿ ವೈದ್ಯರೆಂಬುದು ನಿರೂಪಿತವಾದ ಕಾರಣ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಇದೀಗ ಪೊಲೀಸರು ಕ್ಲಿನಿಕ್‌ಗಳಿಗೆ ಬೀಗ ಜಡಿದಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

 

%d bloggers like this: