You cannot copy content of this page.
. . .

ರೈಲ್ವೆ ಕಾಮಗಾರಿ ಹಿನ್ನೆಲೆ; ಡಿ.15 ರಂದು ರೈಲು ಸಂಚಾರದಲ್ಲಿ ಬದಲಾವಣೆ

  ಡಿಸೆಂಬರ್‍ 15ರ ಯಶವಂತಪುರದ ಬಳಿ ರೈಲ್ವೇ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸಂಚರಿಸುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮೈಸೂರಿನಿಂದ ಯಶವಂತಪುರ ಮಾರ್ಗವಾಗಿ ಸಂಚಾರ ಮಾಡುವ ರೈಲುಗಳ ಮಾರ್ಗ ಬದಲಾವಣೆ ಹಾಗೂ ಮಾರ್ಗದಲ್ಲಿ ಕೆಲ ಭಾಗದ ಸಂಚಾರವನ್ನು ಒಂದು ದಿನದ ಮಟ್ಟಿಗೆ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅದರ ವಿವರ ಈ ರೀತಿ ಇದೆ.

ಭಾನುವಾರ ರೈಲು ಸಂಚಾರದಲ್ಲಿ ಬದಲಾವಣೆ

  • ರೈಲು ಸಂಖ್ಯೆ; 16023/16024 – ಮೈಸೂರು-ಯಲಹಂಕ ಎಕ್ಸ್‍ ಪ್ರೆಸ್‍ ರೈಲು – ಕೆಂಗೇರಿ ಯಿಂದ ಯಲಹಂಕ ವರೆಗೆ ಸಂಚಾರ ಇಲ್ಲ
  • ರೈಲು ಸಂಖ್ಯೆ; 56216/56215 – ಮೈಸೂರು-ಯಶವಂತಪುರ ಪ್ಯಾಸೆಂಜರ್‍ – ಚಿಕ್ಕಬಾಣಾವರ-ಯಶವಂತಪುರವರೆಗೆ ಸಂಚಾರ ಇಲ್ಲ
  • ರೈಲು ಸಂಖ್ಯೆ; 17307 – ಮೈಸೂರು-ಬಾಗಲಕೋಟೆ ಎಕ್ಸ್‍ ಪ್ರೆಸ್‍ – ಮಾರ್ಗ ಬದಲಾವಣೆ – ಮೈಸೂರು-ಬೆಂಗಳೂರು ಕಂಟೋನ್ಮೆಂಟ್‍, ಚನ್ನಸಂದ್ರ, ಯಲಹಂಕ ಮಾರ್ಗದ ಮೂಲಕ ಸಂಚಾರ ; ಹಿಂದಿನ ಮಾರ್ಗ; ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಯಲಹಂಕ.

 

%d bloggers like this: