You cannot copy content of this page.
. . .

ಸಿಎಎ ವಿರೋಧಿಸುವವರು ದಲಿತ ವಿರೋಧಿಗಳು; ಅಮಿತ್‍ ಶಾ

 ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸುವವರನ್ನು ನಾನು ಕೇಳುವ ಪ್ರಶ್ನೆಯೆಂದರೆ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದ ದಲಿತರ ವಿರುದ್ಧ ಹೋಗುವುದರಿಂದ ನೀವು ಏನು ಗಳಿಸುವಿರಿ? ಸಿಎಎಯನ್ನು ವಿರೋಧಿಸುವವರು ದಲಿತ ವಿರೋಧಿಗಳು ಎಂದು ಕೇಂದ್ರ ಗೃಹ ಮಂತ್ರಿ ಅಮಿತ್‍ ಶಾ ಹೇಳಿದರು.

 ಹುಬ್ಬಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಸಿಎಎ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತದ ನೆರೆ ರಾಷ್ಟ್ರಗಳಿಂದ ದೌರ್ಜನ್ಯಕ್ಕೆ ಒಳಗಾಗಿ ತಪ್ಪಿಸಿಕೊಂಡು ಬರುವ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಪೌರತ್ವ ನೀಡಲು ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದರೆ, ವೋಟ್‍ ಬ್ಯಾಂಕ್‍ಗಾಗಿ ವಿರೋಧ ಪಕ್ಷದವರು ಈ ವಿಚಾರವನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

 ರಾಹುಲ್‍ ಗಾಂಧಿ ಅವರು ಸಿಎಎಯನ್ನು ಪೂರ್ತಿ ಓದಲಿ. ಅದರಲ್ಲೇನಾದರೂ ಮುಸ್ಲಿಮರಿಗೆ ಪೌರತ್ವ ನೀಡುವುದಿಲ್ಲ ಎಂದು ಹೇಳಿದ್ದರೆ, ರಾಹುಲ್ ಜೊತೆ ಪ್ರಹ್ಲಾದ್‍ ಜೋಶಿ ಚರ್ಚೆ ಮಾಡಲು ಸಿದ್ಧರಿದ್ದಾರೆ ಎಂದು ಸವಾಲು ಹಾಕಿದರಲ್ಲದೇ, ಈ ದೇಶದಲ್ಲಿ ನಮಗೆ ಎಷ್ಟು ಹಕ್ಕು ಇದೆಯೋ ಅಷ್ಟೇ ಹಕ್ಕುಗಳು ಮುಸ್ಲಿಮರಿಗೂ ಇದೆ ಎಂದರು.

 

%d bloggers like this: