You cannot copy content of this page.
. . .

 ಸುಂಟಿಕೊಪ್ಪ: ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದ ಖದೀಮರಿಬ್ಬರು ಅಂಗಡಿ ಮಾಲೀಕನಿಗೆ ಚಳ್ಳೇಹಣ್ಣು ತಿನ್ನಿಸಿ ಗಲ್ಲಾಪೆಟ್ಟಿಗೆಯಲ್ಲಿದ್ದ ಹಣವನ್ನು ಎಗರಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

 ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ವಿಎಎಂ ಸೂಪರ್ ಮಾರ್ಕೆಟಿಗೆ ಅಂಗಡಿಯ ಪದಾರ್ಥ ಖರೀದಿಸಲು ಇಬ್ಬರು ಅಪರಿಚಿತ ಗ್ರಾಹಕರು ಬಂದು ಕೆಲವು ಸಾಮಗ್ರಿಗಳನ್ನು ಖರೀದಿಸಿದ್ದರು. ತಾವು ಖರೀದಿಸಿದ ಸಾಮಗ್ರಿಗಳ ಬಿಲ್ ೬೦೦ ರೂ. ಆಗಿದ್ದು, ಮತ್ತೆ ವಸ್ತುಗಳನ್ನು ಕೇಳಿದ್ದಾರೆ. ಅಂಗಡಿ ಮಾಲೀಕ ಹಾಗೂ ಕೆಲಸದ ಹುಡುಗ ಅಂಗಡಿ ಒಳಗಿನಿಂದ ಸಾಮಾನು ತರಲು ತೆರಳಿದಾಗ ಖದೀಮರು ಕೈ ಚಳಕ ತೋರಿದ್ದಾರೆ. ಖರೀದಿಸಿದ ವಸ್ತುಗಳ ಬಿಲ್ ಪಾವತಿಸಿ, ಕೆಲಸದ ಹುಡುಗನಿಗೆ ೧೦೦ ರೂ. ಟಿಪ್ಸ್ ಕೂಡ ನೀಡಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

 ಅಂಗಡಿ ಮಾಲೀಕ ನಗದು ಪೆಟ್ಟಿಗೆ ತೆರೆದು ನೋಡಿದಾಗ ಹಣ ಲೂಟಿಯಾಗಿರುವುದನ್ನು ಕಂಡು ಗಾಬರಿ ಬಿದ್ದಿದ್ದಾರೆ. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

%d bloggers like this: