You cannot copy content of this page.
. . .

 ಮೈಸೂರು: ಭಕ್ತನ ಸೋಗಿನಲ್ಲಿ ಬಂದ ಖದೀಮನೊಬ್ಬ 24 ಸಾವಿರ ರೂ. ಹಣವಿದ್ದ ಅರ್ಚಕರ ಬ್ಯಾಗ್‌ನ್ನು ಕಳವು ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಕುವೆಂಪುನಗರ ನವಿಲು ರಸ್ತೆಯ ರಾಘವೇಂದ್ರ ಮಠದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿರುವ ಶ್ರೀಧರ ವಿಠಲ ಎಂಬವರೇ ವಂಚನೆಗೊಳಗಾದವರು.

 ಅರ್ಚಕರು ಎಂದಿನಂತೆ ಮಠಕ್ಕೆ ಬಂದು ಬಾಗಿಲನ್ನು ತೆರೆದು ಒಳಗೆ ಹೋಗಿದ್ದು, ಅದೇ ಸಮಯದಲ್ಲಿ ಅಪರಿಚಿತ ವ್ಯಕ್ತಿ ಮಠಕ್ಕೆ ಬಂದು ಕುಳಿತುಕೊಂಡು ಮಠದಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ವಿಚಾರ ಮಾಡಿದ್ದಾನೆ. ನಂತರ ಅರ್ಚಕರು ಬ್ಯಾಗನ್ನು ಮಠದಲ್ಲಿದ್ದ ಬೀರುವಿನಲ್ಲಿಟ್ಟು, ಸ್ನಾನ ಮಾಡಲು ಹೊರಗೆ ಹೋಗಿದ್ದಾರೆ. ವಾಪಸ್ ಬಂದು ನೋಡಿದಾಗ, ಮಠದ ಒಳಗೆ ಕುಳಿತಿದ್ದ ಅಪರಿಚಿತ ವ್ಯಕ್ತಿ ಹೊರಟು ಹೋಗಿದ್ದನು. ನಂತರ ಪೂಜೆ ಮುಗಿಸಿ, ವಾಪಸ್ ಬೀರುವಿನ ಬಳಿಗೆ ಬಂದು, ಬೀರುವಿನಲ್ಲಿಟ್ಟಿದ್ದ ಬ್ಯಾಗನ್ನು ನೋಡಿದಾಗ ಬ್ಯಾಗ್ ಕಳ್ಳತನವಾಗಿರುವುದು ತಿಳಿದು ಬಂದಿದೆ. ಈ ಸಂಬಂಧ ಅವರು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


 

%d bloggers like this: