You cannot copy content of this page.
. . .

ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ವ್ಯಕ್ತಿ ಬಂಧನ

 ಮೈಸೂರು: ರಸ್ತೆಯಲ್ಲಿ ಓಡಾಡುವ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಕಳ್ಳನನ್ನು ವಿದ್ಯಾರಣ್ಯಪುರಂ ಪೊಲೀಸರು ಬಂಧಿಸಿದ್ದಾರೆ.

 ಉದಯಗಿರಿಯ ಸತ್ಯಾನಗರ ನಿವಾಸಿ ಸೈಯದ್ ಉಮರ್ (೩೯) ಬಂಧಿತ ಆರೋಪಿ. ಈತನಿಂದ 9.32 ಲಕ್ಷ ರೂ. ಮೌಲ್ಯದ 233 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೃತ್ಯವೆಸಗಿದ ನಂತರ ಆಕ್ಟೀವಾ ಹೋಂಡಾ ನಂಬರ್ ಪ್ಲೇಟ್ ಬದಲಿಸಿ ಪರಾರಿಯಾಗುತ್ತಿದ್ದ. ಜೆ.ಪಿ.ನಗರದಲ್ಲಿ ವಾಹನ ತಪಾಸಣೆ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಸ್ಕೂಟರ್ ಡಿಕ್ಕಿಯಲ್ಲಿ ಎರಡು ನಂಬರ್ ಪ್ಲೇಟ್ ಗಳು ಪತ್ತೆಯಾಗಿವೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 

%d bloggers like this: