You cannot copy content of this page.
. . .

ಮನೆ ಬಾಗಿಲು ಮೀಟಿ 2.50 ಲಕ್ಷ ರೂ. ಚಿನ್ನಾಭರಣ ದೋಚಿದ ಕಳ್ಳರು

 ಮೈಸೂರು: ಮನೆಗ ಬಾಗಿಲಿನ ಲಾಕ್ ಮೀಟಿ ಒಳ ನುಗ್ಗಿರುವ ಕಳ್ಳರು ಡ್ರಾಯರ್‌ನಲ್ಲಿದ್ದ ೨.೫೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

 ನಗರದ ಎನ್‌.ಆರ್.ಮೊಹಲ್ಲಾ ನಿವಾಸಿ ಎಂ.ಎಂ.ಗಂಗಾಧರ ಎಂಬವರ ಮನೆಯಲ್ಲಿಯೇ ಕಳ್ಳತನವಾಗಿರುವುದು. ಅವರು ಅನ್ಯ ಕೆಲಸದ ನಿಮಿತ್ತ ಹೊರಗೆ ತೆರಳಿದ್ದ ವೇಳೆ ಮನೆಯ ಬಾಗಿಲಿನ ಡೋರ್ ಲಾಕ್‌ನ್ನು ಮೀಟಿ ಒಳ ನುಗ್ಗಿರುವ ಕಳ್ಳರು ಕಳ್ಳತನ ನಡೆಸಿದ್ದಾರೆ. ೫೦ ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, ೧೮ ಗ್ರಾಂ ತೂಕದ ಒಂದು ಜೊತೆ ಮುತ್ತಿನ ಓಲೆ, ಜುಮುಕಿ, ಮಾಟಿ, ೨೦ ಗ್ರಾಂ ತೂಕದ ಒಂದು ಚಿನ್ನದ ನೆಕ್ಲೇಸ್, ೮ ಗ್ರಾಂ ತೂಕದ ಚಿನ್ನದ ವಂಕಿ ಉಂಗುರ, ೭ ಗ್ರಾಂ ತೂಕದ ಚಿನ್ನದ ಉಂಗುರ, ೫ ಗ್ರಾಂ ತೂಕದ ಒಂದು ಜೊತೆ ಸ್ಟಡ್ಸ್‌ಗಳು ಮತ್ತು ೬ ಸಾವಿರ ರೂ. ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಸಂಬಂಧ ಎನ್.‌ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

%d bloggers like this: