You cannot copy content of this page.
. . .

ಬ್ರಾಹ್ಮಣ ವೇಷದಲ್ಲಿ ಕಳ್ಳತನ; ಕಂಬಕ್ಕೆ ಕಟ್ಟಿ ಗೂಸಾ

 ಬ್ರಾಹ್ಮಣನ ವೇಷದಲ್ಲಿ ಬಂದು ಬ್ರಾಹ್ಮಣರ ಮನೆಯಲ್ಲಿ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ರೆಡ್‍ ಹ್ಯಾಂಡಾಗಿ ಹಿಡಿದು ಕಂಬಕ್ಕೆ ಕಟ್ಟಿ ಗೂಸಾ ಕೊಟ್ಟಿರುವ ಘಟನೆ ಮೈಸೂರಿನ ರಾಮಾನುಜ ರಸ್ತೆ ಒಂದನೇ ಕ್ರಾಸ್‍ ನಲ್ಲಿ ನಡೆದಿದೆ.

  ತಾನು ಭದ್ರಾವತಿಯ‌ ನಿವಾಸಿ ಎಂದು ಹೇಳಿಕೊಂಡಿರುವ ಪ್ರವೀಣ್ ಎಂಬ ಚಾಲಾಕಿ ಕಳ್ಳಿ, ದೇವಾಲಯಕ್ಕೆ ಡೊನೇಷನ್‍ ನೆಪದಲ್ಲಿ ಬಂದು ಬ್ರಾಹ್ಮಣರ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದ. ನಂತರ ಮನೆಯವರಲ್ಲಿ ನಂಬಿಕೆ ಬರುವಂತೆ ಮಾಡಿ, ಅವರಿಗೆ ಗೊತ್ತಿಲ್ಲದಂತೆ ಹಣ, ಆಭರಣ ಎಗರಿಸಿ ಪರಾರಿಯಾಗುತ್ತಿದ್ದ. ಅದೇ ರೀತಿ ಅರ್ಚಕ ವ್ಯಾಸತೀರ್ಥಾಚಾರ್ಯ ಎಂಬುವರ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಈ ಹಿಂದೆಯೂ ಇದೇ ಮನೆಯಲ್ಲಿ 50 ಸಾವಿರ ರೂಪಾಯಿ ಕದ್ದಿದ್ದ. ನಂತರ ಎರಡನೇ ಬಾರಿ ಕಳವು ಮಾಡಲು ಬಂದಾಗ ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ನಂತರ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

 

 

%d bloggers like this: