You cannot copy content of this page.
. . .

ಪಾತ್ರೆಯಲ್ಲಿ ಕುದಿಯುತ್ತಿರುವ ಪಾಪ್‌ಕಾರ್ನ್; ಇನೌಯೆ ಸೌರ ದೂರದರ್ಶಕಕ್ಕೆ ಸೂರ್ಯನ ಮೇಲ್ಮೈ ಕಂಡದ್ದು ಹೀಗೆ!

 ಹವಾಯಿಯ ಬ್ರ್ಯಾಂಡ್‍ ನ್ಯೂ ಡೇನಿಯಲ್ ಕೆ.ಇನೌಯೆ ಸೌರ ದೂರದರ್ಶಕ ಸೆರೆ ಹಿಡಿದ ಸೂರ್ಯನ ಮೇಲ್ಮೈ ಚಿತ್ರಗಳನ್ನು ಬುಧವಾರ ಖಗೋಳಶಾಸ್ತ್ರಜ್ಞರು ಬಿಡುಗಡೆ ಮಾಡಿದ್ದಾರೆ ಸಿಎನ್‍ಎನ್‍ ವರದಿ ಮಾಡಿದೆ. ಸೂರ್ಯನ ಪ್ರಕ್ಷುಬ್ದ ಮೇಲ್ಮೈನ ಚಿತ್ರಗಳನ್ನು ಹಿಂದೆಂದೂ ನೋಡಿಲ್ಲ ಎಂದು ಹೇಳಿದ್ದಾರೆ.

 ಈ ಚಿತ್ರದಲ್ಲಿ ಸೂರ್ಯ, ‘ಪಾತ್ರೆಯಲ್ಲಿ ಕುದಿಯುತ್ತಿರುವ ಪಾಪ್‍ಕಾರ್ನ್’ ರೀತಿ ಕಾಣುತ್ತಾನೆ. ಇದು ಸೂರ್ಯನ‍ ಹಳದಿ ಮಂಡಲದ (ಹಳದಿ ಕುಬ್ಜ) ಕಲ್ಪನೆಯನ್ನೇ ನಿರಾಕರಿಸುತ್ತದೆ. ಹೊಸದಾಗಿ ಬಿಡುಗಡೆಯಾದ ಚಿತ್ರಗಳಲ್ಲಿನ ವಿವರಗಳು ಸೂರ್ಯನನ್ನು ಆವರಿಸಿರುವ ಪ್ಲಾಸ್ಮಾವನ್ನು ತೋರಿಸುತ್ತವೆ. ಅದು ಕುದಿಯುವಂತೆ ಕಾಣುತ್ತದೆ.

 ‘ಎನ್‍ಎಸ್‍ಎಫ್‍ (ನ್ಯಾಷನಲ್ ಸೈನ್ಸ್‍ ಫೌಂಡೇಷನ್) ಭೂ-ಆಧಾರಿತ ದೂರದರ್ಶಕದ ಮೂಲಕ ಕೆಲಸ ಆರಂಭಿಸಿದ್ದು, ಮೊದಲ ಚಿತ್ರಗಳಿಗಾಗಿ ನಾವು ಕುತೂಹಲದಿಂದ ಕಾಯುತ್ತಿದ್ದೇವೆ’ ಎಂದು ಎನ್‍ಎಸ್‍ಎಫ್‍ನ ನಿರ್ದೇಶಕ ಫ್ರಾನ್ಸ್ ಕಾರ್ಡೋವಾ ಹೇಳಿದ್ದಾರೆ.

 ‘ಸೂರ್ಯನ ಕುರಿತ ಸಾಕಷ್ಟು ವಿವರ ನೀಡುವ ಚಿತ್ರಗಳು ಮತ್ತು ವಿಡಿಯೊಗಳನ್ನು ನಾವೀಗ ಬಿಡುಗಡೆ ಮಾಡಿದ್ದೇವೆ. ಎನ್‍ಎಸ್‍ಎಫ್‍ನ ಇನೌಯೆ ಸೌರ ದರ್ಶಕವು ಸೂರ್ಯನ ಕಾಂತಕ್ಷೇತ್ರಗಳನ್ನು ನಕ್ಷೆ ಮಾಡಲು ಸಾಧ್ಯವಾಗುತ್ತದೆ. ಅಲ್ಲಿ ಸೌರಸ್ಫೋಟಗಳು ಸಂಭವಿಸುತ್ತವೆ. ಅದು ಭೂಮಿಯ ಮೇಲಿನ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಈ ದೂರದರ್ಶಕವು ಬಾಹ್ಯಾಕಾಶದ ಹವಾಮಾನ ಬಗೆಗಿನ ನಮ್ಮ ತಿಳಿವಳಿಕೆಯನ್ನು ಸುಧಾರಿಸುತ್ತದೆ. ಸೌರ ಬಿರುಗಾಳಿ ಕುರಿತು ಮುನ್ಸೂಚಕರಿಗೆ ಮಾಹಿತಿ ನೀಡುವಲ್ಲಿ ಸಹಕಾರಿಯಾಗಿದೆ.’

 

%d bloggers like this: