You cannot copy content of this page.
. . .

  ಆಸ್ತಿ ಮೇಲೆ ಕಣ್ಣು ಹಾಕಿದ್ದ ವ್ಯಕ್ತಿಯೊಬ್ಬ ತನ್ನ ಅತ್ತಿಗೆಯನ್ನೇ ಕೊಲ್ಲಲು ಸುಪಾರಿ ಕೊಟ್ಟು ಸಿಕ್ಕಿಬಿದ್ದಿರುವ ಘಟನೆ ಮಡಿಕೇರಿಯಲ್ಲಿ ಬೆಳಕಿಗೆ ಬಂದಿದೆ. ಮಡಿಕೇರಿಯ ಚೇಲಾವರದ ಸುಬ್ಬಯ್ಯ ಎಂಬಾತನೇ ಅತ್ತಿಗೆಯ ಕೊಲೆಗೆ ಸುಪಾರಿ ಕೊಟ್ಟ ಆಸಾಮಿ ತಪ್ಪಿಗಾಗಿ ಆರೋಪಿ ಕಂಬಿ ಎಣಿಸುತ್ತಿದ್ದಾನೆ.

 ಆರೋಪಿ ಸುಬ್ಬಯ್ಯ ತನ್ನ ಅಣ್ಣನ ಕಾಫಿ ಎಸ್ಟೇಟ್ ಅನ್ನು ಕಬಳಿಸಲು ಅನೇಕ ಬಾರಿ ಪ್ರಯತ್ನಪಟ್ಟಿದ್ದ. ಆದರೆ ಅದರಲ್ಲಿ ವಿಫಲನಾಗಿದ್ದ. ಕಾಫಿ ಎಸ್ಟೇಟ್ ಅತ್ತಿಗೆಯ ಹೆಸರಲ್ಲಿ ಇರುವುದು ತಿಳಿದು ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದ ಎನ್ನಲಾಗಿದೆ.

  ಅತ್ತಿಗೆಯನ್ನು ಕೊಲೆಗೈಯಲು ಅದೇ ತೋಟದಲ್ಲಿ ಕೆಲಸ ಮಾಡುವ ಅಸ್ಸಾಂ ಮೂಲದ ವ್ಯಕ್ತಿಯೋರ್ವನಿಗೆ ಸುಪಾರಿ ನೀಡಿದ್ದ. ಕೊಲೆಯ ನಂತರ 5 ಲಕ್ಷ ರೂಪಾಯಿ ಹಣ ನೀಡುವುದಾಗಿ ಹೇಳಿದ್ದ. ಆದರೆ ಆ ಕಾರ್ಮಿಕ ಈ ವಿಷಯವನ್ನು ಸುಬ್ಬಯ್ಯನ ಅತ್ತಿಗೆಯ ಬಳಿ ಹೇಳಿದ್ದು, ಇದರಿಂದ ಪ್ರಕರಣ ಬಯಲಾಗಿದೆ. ಈ ಬಗ್ಗೆ ನಾಪೊಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

%d bloggers like this: