You cannot copy content of this page.
. . .

ಸುಳ್ಳು ಹೇಳದ ರಾಜಕಾರಣಿ ಯಾರಿದ್ದಾರೆ..?: ಸಿದ್ದರಾಮಯ್ಯಗೆ ವಿಶ್ವನಾಥ್‍ ಪ್ರಶ್ನೆ

  ನಿಮ್ಮನ್ನೂ ಸೇರಿಸಿ ಸುಳ್ಳು ಹೇಳದ ರಾಜಕಾರಣಿ ಯಾರಿದ್ದಾರೆ ಎಂದು ಸಿದ್ದರಾಮಯ್ಯರನ್ನು ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್‍.ವಿಶ್ವನಾಥ್‍ ಪ್ರಶ್ನಿಸಿದ್ದಾರೆ. ವಿಶ್ವನಾಥ್‍ ಸುಳ್ಳು ಹೇಳುತ್ತಾರೆಂದು ಹುಣಸೂರಿನಲ್ಲಿ ಇಂದು ಬೆಳಗ್ಗೆ ಪ್ರಚಾರದ ಮೇಲೆ ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಹುಣಸೂರಿನಲ್ಲಿ ಮತ ಬೇಟೆ ವೇಳೆ ಪ್ರತಿಕ್ರಿಯಿಸಿದ ವಿಶ್ವನಾಥ್‍, ಸುಳ್ಳು ಹೇಳದ ರಾಜಕಾರಣಿ ಯಾರಿದ್ದಾರೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.

  ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಹುಣಸೂರಿನಲ್ಲಿ ಅಭ್ಯರ್ಥಿಗಳು ಭರ್ಜರಿ ಮತ ಬೇಟೆ ನಡೆಸಿದರು. ಕಾಂಗ್ರೆಸ್‍ ಅಭ್ಯರ್ಥಿ ಎಚ್‍.ಪಿ.ಮಂಜುನಾಥ್‍ ಪರ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಿದರು. ಈ ವೇಳೆ ಅವರು, ವಿಶ್ವನಾಥ್‍ ಮತದಾರರನ್ನು ಕೇಳದೆ ಶಾಸಕ ಸ್ಥಾನವನ್ನು ಮಾರಿಕೊಂಡಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ವಿಶ್ವನಾಥ್‍ ಮತಗಿಟ್ಟಿಸಿಕೊಳ್ಳುವುದಕ್ಕಾಗಿ ನನ್ನನ್ನು ಹೊಗಳುತ್ತಿದ್ದಾರೆ. ಅವರು ಪ್ರಚಾರದ ವೇಳೆ ಬರೀ ಸುಳ್ಳುಗಳನ್ನೇ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದರು.

  ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್‍, ನಿಮ್ಮನ್ನು ಒಳ್ಳೆಯವರು ಎನ್ನುವುದೇ ಸುಳ್ಳು ಎನ್ನುವುದಾದರೆ ಇನ್ಮುಂದೆ ಹೊಗಳುವುದಿಲ್ಲ. ನಿಮ್ಮನ್ನು ಹೊಗಳಿ ನನಗೆ ಯಾವ ಲಾಭವೂ ಆಗುವುದಿಲ್ಲ ಎಂದರು.

 

%d bloggers like this: