You cannot copy content of this page.
. . .

 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ವಿಧಾನಸೌಧದಲ್ಲಿ ಘೋಷಿಸಿದ್ದಾರೆ.

ಪ್ರಶಸ್ತಿಗಳ ವಿವರ ಇಲ್ಲಿದೆ:

  ಜಿ.ಕೆ. ಶ್ರೀನಿವಾಸ್ ಗೆ ಡಾ.ರಾಜ್ ಕುಮಾರ್ ಪ್ರಶಸ್ತಿ, ಪಿ. ಶೇಷಾದ್ರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಬಿ.ಎಸ್. ಬಸವರಾಜು ಡಾ.ವಿಷ್ಣುವರ್ಧನ್ ಪ್ರಶಸ್ತಿ.

ಅತ್ಯುತ್ತಮ ನಟ: ರಾಘವೇಂದ್ರ ರಾಜ್ ಕುಮಾರ್, ಅತ್ಯುತ್ತಮ ನಟಿ: ಮೇಘನಾ ರಾಜ್, ಅತ್ಯುತ್ತಮ ಪೋಷಕ ನಟ: ಬಾಲಾಜಿ ಮನೋಹರ್, ಅತ್ಯುತ್ತಮ ಪೋಷಕ ನಟಿ: ವೀಣಾ ಸುಂದರ್,  ಅತ್ಯುತ್ತಮ ಬಾಲನಟ; ಮಾಸ್ಟರ್ ಆರೆನ್

ಮೊದಲ ಅತ್ಯುತ್ತಮ ಚಿತ್ರ: ಆ ಕರಾಳ ರಾತ್ರಿ, ಎರಡನೇ ಅತ್ಯುತ್ತಮ ಚಿತ್ರ: ರಾಮನ ಸವಾರಿ, ಮೂರನೇ ಅತ್ಯುತ್ತಮ ಚಿತ್ರ: ಒಂದಲ್ಲಾ ಎರಡಲ್ಲಾ, ವಿಶೇಷ ಸಾಮಾಜಿಕ ಕಳಕಳಿ ಚಿತ್ರ: ಸಂತಕವಿ ಕನಕದಾಸರ ರಾಮಧಾನ್ಯ, ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಅತ್ಯುತ್ತಮ ಮಕ್ಕಳ ಚಿತ್ರ: ಹೂವು ಬಳ್ಳಿ,  ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಬೆಳಕಿನ ಕನ್ನಡಿ, ಅತ್ಯುತ್ತಮ ಪ್ರಾದೇಶಿಕ ಚಿತ್ರ: ದೇಯಿ ಬೈದೇತಿ.

ಅತ್ಯುತ್ತಮ ಕಥೆ: ಹರೀಶ್ ಎಸ್, ಅತ್ಯುತ್ತಮ ಚಿತ್ರಕಥೆ: ಪಿ.ಶೇಷಾದ್ರಿ, ಅತ್ಯುತ್ತಮ ಸಂಭಾಷಣೆ: ಶಿರಿಷಾ ಜೋಶಿ, ಅತ್ಯುತ್ತಮ ಸಂಗೀತ ನಿರ್ದೇಶನ: ರವಿ ಬಸ್ರೂರು, ಅತ್ಯುತ್ತಮ ಗೀತರಚನೆ: ಡಾ.ಬರಗೂರು ರಾಮಚಂದ್ರಪ್ಪ.

 

 

%d bloggers like this: