You cannot copy content of this page.
. . .

ನಾವು ಗುಂಪಾಗಿರಲ್ಲ, ಎಲ್ಲರಿಗೂ ಮಂತ್ರಿಗಿರಿ ಕೇಳಲ್ಲ; ಎಸ್‍.ಟಿ.ಸೋಮಶೇಖರ್

 ನಾವು ಈಗ ಬಿಜೆಪಿ ಶಾಸಕರು. ನಾವು ಮುಂದೆ ಇದ್ದ ರೀತಿ ಇನ್ಮುಂದೆ ಗುಂಪಾಗಿ ಇರುವುದಿಲ್ಲ ಎಂದು ಯಶವಂತಪುರದ ಶಾಸಕ ಎಸ್‍.ಟಿ.ಸೋಮಶೇಖರ್‍ ಹೇಳಿದ್ದಾರೆ. ಸುತ್ತೂರು ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊದಲಿದ್ದ ಪರಿಸ್ಥಿತಿ ಈಗಿಲ್ಲ. ಹೀಗಾಗಿ ನಾವು ಮೊದಲಿನಂತೆ ಒಟ್ಟಿಗೆ ಸಭೆ ನಡೆಸಿ ಮಂತ್ರಿ ಸ್ಥಾನಕ್ಕಾಗಿ ಒತ್ತಡ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.

  ಉಪಚುನಾವಣೆ ಸಂದರ್ಭದಲ್ಲಿ ಕೆಲವರಿಗೆ ಸ್ಪರ್ಧಿಸದಂತೆ ಯಡಿಯೂರಪ್ಪ ಸೂಚಿಸಿದ್ದರು. ಅದಕ್ಕೆ ಆರ್‍.ಶಂಕರ್‍ ಮಾತ್ರ ಒಪ್ಪಿದರು. ಆದರೆ ಎಂಟಿಬಿ ನಾಗರಾಜ್‍ ಹಾಗೂ ಎಚ್‍.ವಿಶ್ವನಾಥ್‍ ಒಪ್ಪಲಿಲ್ಲ ಎಂದು ಇದೇ ವೇಳೆ ಎಸ್‍.ಟಿ.ಸೋಮಶೇಖರ್‍ ಹೇಳಿದ್ದಾರೆ.

 

%d bloggers like this: