You cannot copy content of this page.
. . .

ಮೋದಿ ಒಬ್ಬ ಸನ್ಯಾಸಿ, ಟೀಕೆ ಮಾಡುವುದೇ ಕಾಂಗ್ರೆಸ್ ಕೆಲಸ; ಎಸ್.ಎಲ್.ಭೈರಪ್ಪ

  ಪ್ರಧಾನಿ ನರೇಂದ್ರ ಮೋದಿಯವರು ಒಬ್ಬ ಸನ್ಯಾಸಿ. ಮೋದಿಯನ್ನು ಟೀಕೆ ಮಾಡುವುದೇ ಕಾಂಗ್ರೆಸ್‍ ಕೆಲಸ ಎಂದು ಸಾಹಿತಿ ಎಸ್‍.ಎಲ್‍.ಭೈರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್‍ ನವರು ಮುಸಲ್ಮಾನರನ್ನು ಎತ್ತಿ ಕಟ್ಟುತ್ತಿದ್ದಾರೆ. ಸಿಎಎ ಯಿಂದ ಭಾರತದ ಮುಸಲ್ಮಾನರಿಗೆ ಯಾವುದೇ ತೊಂದತೆ  ಇಲ್ಲ ಎಂದು ಹೇಳಿದರು.

  ಬ್ರಿಟೀಷರು ಯಾವ ತಂತ್ರ ಮಾಡಿದರೋ ಕಾಂಗ್ರೆಸ್‍ ಕೂಡಾ ಅದೇ ತಂತ್ರ ಮಾಡುತ್ತಿದೆ. ನೆಹರೂ ಆಡಳಿತದಲ್ಲಿ ಹಿಂದೂ ಜಾತಿಗಳನ್ನು ಒಡೆದಿದ್ದರು. ಮುಸ್ಲಿಂ ಸಮುದಾಯವನ್ನು ಓಟ್‍ ಬ್ಯಾಂಕ್‍ ಆಗಿ ಮಾಡಿಕೊಂಡಿದ್ದರು. ಹೀಗಾಗಿ ಕಾಂಗ್ರೆಸ್‍ ಸಿಎಎ ವಿಚಾರದಲ್ಲಿ ಮುಸ್ಲಿಮರನ್ನು ಎತ್ತಿಕಟ್ಟಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಭೈರಪ್ಪ ಆರೋಪ ಮಾಡಿದರು.

  ಜೆಎನ್‍ ಯು ಗಲಾಟೆ ಪ್ರಸ್ತಾಪಿಸಿದ ಭೈರಪ್ಪ, ವಿದ್ಯಾರ್ಥಿಗಳು ಕಾಲೇಜಿನ ಸೌಕರ್ಯಗಳ ಬಗ್ಗೆ, ಪಾಠದ ಬಗ್ಗೆ, ಪುಸ್ತಕಗಳ ಬಗ್ಗೆ ಮಾತನಾಡಬೇಕು. ಅದನ್ನು ಬಿಟ್ಟು ಸಕ್ರಿಯ ರಾಜಕಾರಣಕ್ಕೆ ಇಳಿಯಬಾರದು. ತೆರಿಗೆದಾರರ ಹಣದಿಂದ ವಿವಿಗಳ ನಡೆಯುತ್ತಿವೆ. ಅದು ಉಪಯೋಗವಾಗುವಂತೆ ಮಾತ್ರ ಬಳಸಿಕೊಳ್ಳಬೇಕು ಎಂದು ಹೇಳಿದರು. ಮೈಸೂರು ವಿವಿಯಲ್ಲಿ ನಡೆದ ಪ್ರತಿಭಟನೆಗೂ ಇದೇ ಅನ್ವಯಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

 

 

%d bloggers like this: