. . .

ಅಭ್ಯರ್ಥಿ ಜೊತೆ ಹೋಟೆಲ್ ನಲ್ಲಿ ಬಿಸಿಬಿಸಿ ದೋಸೆ ಸವಿದ ಸಿದ್ದರಾಮಯ್ಯ..

173 Views

 ಎಲೆಕ್ಷನ್‍ ಬಿಸಿ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಬಿಡವು ಮಾಡಿಕೊಂಡು ಹುಣಸೂರು ಕಾಂಗ್ರೆಸ್‍ ಅಭ್ಯರ್ಥಿ ಜೊತೆ ಹೋಟೆಲ್‍ ಗೆ ಹೋಗಿ ಬಿಸಿ ಬಿಸಿ ಮಸಾಲೆ ದೋಸೆ ಸವಿದಿದ್ದಾರೆ. ಬಹಿರಂಗ ಪ್ರಚಾರ ಇವತ್ತು ಸಂಜೆಅಂತ್ಯವಾಗಲಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಅಂತಿಮ ಕಸರತ್ತು ನಡೆಯುತ್ತಿದೆ. ಈ ಬ್ಯುಸಿಯ ನಡುವೆ ಸಿದ್ದರಾಮಯ್ಯ, ಮೈಸೂರಿನ ದಟ್ಟಗಳ್ಳಿಯಲ್ಲಿರುವ ನಳಪಾಕ್‍ ಹೋಟೆಲ್‍ ಗೆ ಆಗಮಿಸಿ ಬ್ರೇಕ್‍ ಫಾಸ್ಟ್‍ ಮಾಡಿದರು.

   ಇಂದು ಬೆಳಗ್ಗೆ ಹಣಸೂರು ಕಾಂಗ್ರೆಸ್‍ ಅಭ್ಯರ್ಥಿ ಎಚ್‍.ಪಿ.ಮಂಜುನಾಥ್‍ ಹಾಗೂ ಮಾಜಿ ಶಾಸಕ ವೆಂಕಟೇಶ್‍ ಜೊತೆ ಆಗಮಿಸಿದ ಸಿದ್ದರಾಮಯ್ಯ, ಸ್ವಲ್ಪ ಹೊತ್ತು ಎಲೆಕ್ಷನ್‍ ತಲೆಬಿಸಿಯನ್ನು ಪಕ್ಕಕ್ಕಿಟ್ಟು, ಇಡ್ಲಿ, ವಡೆ, ಮಸಾಲೆ ದೋಸೆ ಸವಿದರು. ನಂತರ ಮತಕ್ಷೇತ್ರದ ಕಡೆಗೆ ಹೆಜ್ಜೆ ಹಾಕಿದರು.

Leave a Reply

 

%d bloggers like this: