You cannot copy content of this page.
. . .

ಸಿದ್ಧಗಂಗೆಯಲ್ಲಿ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

 ತುಮಕೂರು: ಸಿದ್ಧಗಂಗಾ ಮಠದಲ್ಲಿ ಇಂದು (ಭಾನುವಾರ)ಶಿವಕುಮಾರ ಸ್ವಾಮೀಜಿ ಮೊದಲ ವರ್ಷದ ಪುಣ್ಯಸ್ಮರಣೆ ನಡೆಯಿತು. ನಾಡಿನ ನಾನಾ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಆಗಮಿಸಿ ಶ್ರೀಗಳ ಪುಣ್ಯ ಸಂಸ್ಮರಣೋತ್ಸವಕ್ಕೆ ಸಾಕ್ಷಿಯಾದರು.

 ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವರಾದ ಸಿ.ಟಿ.ರವಿ, ವಿ.ಸೋಮಣ್ಣ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಸೇರಿದಂತೆ ನಾನಾ ಮಠಾಧೀಶರು ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು.

 ರಾಜ್ಯದ ದೂರದ ಜಿಲ್ಲೆಗಳ ಭಕ್ತರು ಶನಿವಾರವೇ ಮಠಕ್ಕೆ ಆಗಮಿಸಿದ್ದರು. ಭಕ್ತರಿಂದ ಗಿಜಿಗುಡುತ್ತಿರುವ ಮಠದ ಪ್ರಾಂಗಣದಲ್ಲಿ ಭಾನುವಾರ ಬೆಳಿಗ್ಗೆ ಸ್ವಾಮೀಜಿ ಭಾಪಾವಚಿತ್ರದ ಮೆರವಣಿಗೆ ನಡೆಯಿತು. ಮಠದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

 ಮಠಕ್ಕೆ ಆಗಮಿಸುವ ಭಕ್ತರಿಗಾಗಿ ತರಹೇವಾರಿ ಖಾದ್ಯಗಳ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಶಿರಾದ ಹಜ್ರತ್ ಸೈಯದ್ ಮೊಹಮದ್ ಷಾ ಖಾದ್ರಿ ಶಿಕ್ಷಣ ಸಂಸ್ಥೆ ಭಕ್ತಿಗೆ ಮಜ್ಜಿಗೆ ಮತ್ತು ನೀರು ವಿತರಣೆ ವ್ಯವಸ್ಥೆ ಮಾಡಿದೆ. ಮಠದ ಪ್ರವೇಶದ್ವಾರದಲ್ಲಿಯೇ ಈ ವ್ಯವಸ್ಥೆ ಮಾಡಲಾಗಿತ್ತು.  

 

%d bloggers like this: