You cannot copy content of this page.
. . .

ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ತಾರಾ..?: ಮಾಜಿ ಸ್ಪೀಕರ್ ಜೊತೆಗಿನ ಮಾತುಕತೆ ಏನು..?

  ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್‍ ಬಚ್ಚೇಗೌಡರನ್ನು ಬಿಜೆಪಿಗೆ ವಾಪಸ್‍ ಸೇರಿಸಿಕೊಳ್ಳೋದು ಬಹುತೇಕ ಡೌಟು. ಈ ಹಿನ್ನೆಲೆಯಲ್ಲಿ ಶರತ್‍ ಬಚ್ಚೇಗೌಡರು, ಕಾಂಗ್ರೆಸ್‍ ಸೇರ್ತಾರಾ ಅನ್ನೋ ಅನುಮಾನ ಮೂಡಿದೆ. ಆ ಅನುಮಾನಕ್ಕೆ ಪುಷ್ಠಿ ಎಂಬಂತೆ ಶರತ್‍ ಬಚ್ಚೇಗೌಡರು ನಿನ್ನೆ ತಡರಾತ್ರಿ ಮಾಜಿ ಸ್ಪೀಕರ್‍ ರಮೇಶ್‍ ಕುಮಾರ್‍ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

  ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮದಲ್ಲಿ ರಮೇಶ್ ಕುಮಾರ್ ಅವರ ನಿವಾಸ ಇದೆ. ಇಲ್ಲಿಗೆ ಗುರುವಾರ ರಾತ್ರಿ ಭೇಟಿ ನೀಡಿದ್ದ ಶರತ್ ಬಚ್ಚೇಗೌಡರು, ಅರ್ಧ ಗಂಟೆಗೂ ಹೆಚ್ಚು ಕಾಲ ರಮೇಶ್‍ ಕುಮಾರ್‍ ಜೊತೆ ಮಾತುಕತೆ ನಡೆಸಿದ್ದಾರೆ. ಶರತ್‍ ಬಚ್ಚೇಗೌಡರು ಉಪಚುನಾವಣೆ ಸಮಯದಲ್ಲೇ ಕಾಂಗ್ರೆಸ್‍ ಸೇರಿ, ಕೈ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಈಗ ಶರತ್‍ ಅವರು ರಮೇಶ್‍ ಕುಮಾರ್‍ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

  ಉಪ ಚುನಾವಣೆಯಲ್ಲಿ ರಾಜಕೀಯ ಬದ್ದ ವೈರಿ ಎಂಟಿಬಿ ನಾಗರಾಜ್ ಅವರನ್ನು ಸೋಲಿಸಿರುವ ಶರತ್ ಬಚ್ಚೇಗೌಡ ಅವರನ್ನು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷ ಉಚ್ಛಾಟನೆ ಮಾಡಿತ್ತು. ಮತ್ತೆ ವಾಪಸ್ ಪಕ್ಷಕ್ಕೆ ಸೇರಿಸಿಕೊಳ್ಳಬಾರದೆಂದು ಎಂಟಿಬಿ ನಾಗರಾಜ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದರು. ಹೀಗಾಗಿ ಸದ್ಯಕ್ಕೆ ಬಿಜೆಪಿಗೆ ಎಂಟ್ರಿ ಸಿಗುವುದು ಡೌಟಾಗಿದ್ದರಿಂದ ಶರತ್‍ ಕಾಂಗ್ರೆಸ್‍ ಕಡೆ ಒಲವು ತೋರಿಸಿದ್ದಾರೆ ಎನ್ನಲಾಗುತ್ತಿದೆ.

 

%d bloggers like this: