You cannot copy content of this page.
. . .

ಸಾಯಿಬಾಬಾ ದೇವಾಲಯಕ್ಕೆ 8 ಲಕ್ಷ ರೂ. ದಾನ ಮಾಡಿದ ವೃದ್ಧ ಭಿಕ್ಷುಕ

 ವೃದ್ಧರೊಬ್ಬರು ಭಿಕ್ಷೆ ಎತ್ತಿ ಗಳಿಸಿದ 8 ಲಕ್ಷ ರೂ. ಹಣವನ್ನು ಆಂಧ್ರಪ್ರದೇಶದ ವಿಜಯವಾಡ ಸಾಯಿಬಾಬ ದೇವಾಲಕ್ಕೆ ನೀಡಿ ಗಮನ ಸೆಳೆದಿದ್ದಾರೆ. ಏಳು ವರ್ಷಗಳ ಅವಧಿಯಲ್ಲಿ 8 ಲಕ್ಷ ರೂ. ಹಣವನ್ನು ದೇವಾಲಯಕ್ಕೆ ದಾನ ಮಾಡಿದ್ದಾರೆ.

 ಭಿಕ್ಷುಕ ಯಡಿ ರೆಡ್ಡಿ (73) ದೇವಸ್ಥಾನಕ್ಕೆ ಹಣ ನೀಡಿರುವವರು. ಇವರು ರಿಕ್ಷಾ ಗಾಡಿ ಎಳೆಯುವ ಕೆಲಸ ಮಾಡಿಕೊಂಡಿದ್ದರು. ಕಾಲುಗಳು ಶಕ್ತಿ ಕಳೆದುಕೊಂಡಾಗ ಅನಿವಾರ್ಯವಾಗಿ ಭಿಕ್ಷೆ ಎತ್ತುವ ಕೆಲಸಕ್ಕೆ ಇಳಿದರು.

 ’40 ವರ್ಷ ರಿಕ್ಷಾ ಗಾಡಿ ಎಳೆಯುವ ಕೆಲಸ ಮಾಡಿದ್ದೇನೆ. ಈ ವೇಳೆ ಮೊದಲ ಬಾರಿಗೆ ಸಾಯಿಬಾಬ ದೇವಾಲಯದ ಪ್ರಾಧಿಕಾರಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದ್ದೆ. ಆರೋಗ್ಯ ಸಮಸ್ಯೆ ಎದುರಾಯಿತು. ನನಗೆ ಹಣದ ಅವಶ್ಯಕತೆ ಇರಲಿಲ್ಲ. ಹೀಗಾಗಿ, ದೇವಸ್ಥಾನಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಭಿಕ್ಷಾಟನೆಗೆ ಮುಂದಾದೆ’ ಎಂದು ಎಎನ್‍ಐ ಸುದ್ದಿಸಂಸ್ಥೆಗೆ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

 ರೆಡ್ಡಿ, ದೇವಾಲಯಕ್ಕೆ ದೇಣಿಗೆ ನೀಡಲು ಶುರು ಮಾಡಿದ್ದರಿಂದ ಆತನ ಆದಾಯವೂ ಹೆಚ್ಚಳವಾಗತೊಡಗಿತು. ದೇವಾಲಯಕ್ಕೆ ದೇಣಿಗೆ ನೀಡಿದ ಈತನನ್ನು ಜನರೂ ಗುರುತಿಸತೊಡಗಿದರು. ಆಗಿನಿಂದ ಆಶ್ಚರ್ಯಕರ ರೀತಿಯಲ್ಲಿ ನನ್ನ ಆದಾಯವೂ ಹೆಚ್ಚತೊಡಗಿತು. ಹೀಗಾಗಿ, ಅವರು ದೇವಾಲಯಕ್ಕೆ 8 ಲಕ್ಷ ರೂ. ಹಣ ನೀಡಲು ಸಾಧ್ಯವಾಯಿತು.

 ‘ರೆಡ್ಡಿ ಅವರ ಸಹಾಯದಿಂದಾಗಿ ಗೋಶಾಲೆ ನಿರ್ಮಿಸುತ್ತೇವೆ. ದೇವಾಲಯಕ್ಕೆ 8 ಲಕ್ಷ ರೂ. ಹಣ ನೀಡಿದ್ದಾರೆ. ಅವರ ಪರಿಶ್ರಮ ಹಾಗೂ ಶ್ರದ್ಧೆಯನ್ನು ನಾವು ಮೆಚ್ಚುತ್ತೇವೆ. ನಾವು ಯಾರಿಂದಲೂ ದೇಣಿಗೆ ಸಂಗ್ರಹಿಸುತ್ತಿಲ್ಲ. ಆದರೆ, ಜನರೇ ಸ್ವಇಚ್ಛೆಯಿಂದ ದೇವಸ್ಥಾನಕ್ಕೆ ಹಣ ನೀಡುತ್ತಿದ್ದಾರೆ’ ಎಂದು ದೇವಾಲಯದ ಪ್ರಾಧಿಕಾರ ಹೇಳಿತು.  

Leave a Reply

 

%d bloggers like this: