. . .

ಗಂಡಿಗೆ ಹೆರುವುದೇ ಕೆಲಸ; ಇದು ಪುರುಷ ಕಡಲ್ಗುದುರೆಯ ಪ್ರಸವ ವೇದನೆ ಕತೆ..!

64 Views

     ಗರ್ಭ ಧರಿಸೋದು, ಹೆರಿಗೆ ನೋವು ಅನುಭವಿಸೋದು, ಮಗುವಿಗೆ ಜನ್ಮ ನೀಡೋದು ಎಲ್ಲಾ ಹೆಣ್ಣಿಗೆ ಸಂಬಂಧಿಸಿದ್ದು.. ಹೀಗಂತ ನಾವು ನೀವೆಲ್ಲರೂ ನಂಬಿದ್ದೇವೆ.. ಆದ್ರೆ, ಮೀನಿನ ಸಂತತಿಯೊಂದರಲ್ಲಿ ಜನ್ಮ ನೀಡುವ ಹೆಣ್ತನವೇನಿದ್ದರೂ ಗಂಡಿನ ಕೆಲಸ.. ಕಡಲ ಕುದುರೆ ಎಂದು ಕರೆಯಲ್ಪಡುವ ಮೀನಿನ ಜಾತಿಯಲ್ಲಿ ಗಂಡು ಕಡಲ ಕುದುರೆಗಳೇ ಗರ್ಭ ಧರಿಸುತ್ತವೆ, ಪ್ರಸವ ವೇದನೆ ಅನುಭವಿಸುತ್ತವೆ..!

    ಹೆಣ್ಣು ಹಾಗೂ ಗಂಡು ಕಡಲ ಕುದುರೆಗಳ ದೇಹ ರಚನೆ ವಿಭಿನ್ನವಾಗಿರುತ್ತೆ. ಗಂಡು ಕಡಲ ಕುದುರೆಯ ಹೊಟ್ಟೆಯ ಕೆಳಭಾಗದಲ್ಲಿ ಚೀಲದ ರೀತಿಯ ಜಾಗವಿದ್ದು, ಅದಕ್ಕೆ ಸಣ್ಣದೊಂದು ರಂಧ್ರವಿರುತ್ತದೆ. ಇಲ್ಲಿ ಮಿಲನಕ್ಕಾಗಿ ಹೆಣ್ಣು ಕಡಲ ಕುದುರೆ ಗಂಡನ್ನು ಹುಡುಕಿಕೊಂಡು ಬರುತ್ತದೆ. ಅದರ ಜೊತೆ ಸರಸವಾಡುವ ಸಂದರ್ಭದಲ್ಲಿ ಹೆಣ್ಣು ಕಡಲ ಕುದುರೆ ತನ್ನ ಜನನೇಂದ್ರಿಯದಿಂದ ಬಂದ ಅಂಡಾಣುಗಳನ್ನು ರಂಧ್ರದ ಮೂಲಕ ಗಂಡಿನ ಚೀಲಕ್ಕೆ ಸೇರಿಸುತ್ತದೆ. ಈ ವೇಳೆ ಗಂಡಿನ ಶುಕ್ರಾಣುಗಳೂ ಮಿಲನವಾಗುತ್ತವೆ. ಈ ಕ್ರಿಯೆಯ ನಂತರ ರಂಧ್ರ ಮುಚ್ಚಿಹೋಗಿತ್ತು. ಚೀಲದ ಒಳಗಿನ ಪೊರೆಯಲ್ಲಿ ಉತ್ಪತ್ತಿಯಾಗುವ ಸ್ರಾವ ಭ್ರೂಣಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ಗಂಡು ಗರ್ಭ ಧರಿಸಿರುವಾಗ ಹೆಣ್ಣು ಕುದುರೆ ಪ್ರತಿ ದಿನ ಸಂಗಾತಿಯ ಬಳಿ ಬಂದು ಕುಶಲೋಪರಿ ವಿಚಾರಿಸುತ್ತೆ.

  ಗಂಡು ಕಡಲ ಕುದುರೆ ಬಸಿರಾದ 40 ರಿಂದ 45 ದಿನಗಳಲ್ಲಿ ಮರಿಗಳಿಗೆ ಜನ್ಮ ನೀಡುತ್ತದೆ. ಒಮ್ಮೆಗೆ 100 ರಿಂದ 1000 ಮರಿಗಳನ್ನು ಹಾಕುತ್ತದೆ. ಮರಿಗಳು ಹೊರಬರುವಾಗ ಗಂಡು ಕಡಲ ಕುದುರೆ ತನ್ನ ಹೊಟ್ಟೆಯನ್ನು ಬಂಡೆಗೆ ಉಜ್ಜುತ್ತಿರುತ್ತದೆ.  ಹೆರಿಗೆಯಾಗುವಾಗ ಅದು ಪ್ರಸವವೇದನೆ ಅನುಭವಿಸುತ್ತದೆ ಅನ್ನೋದಕ್ಕೆ ಇದು ಸಾಕ್ಷಿ.. ಈ ಗಂಡು ಕಡಲ ಕುದುರೆಗಳು ಏಕಪತ್ನಿ ವ್ರತ ಆಚರಿಸುತ್ತವೆ. ಅಷ್ಟೇ ಅಲ್ಲ, ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಮತ್ತೆ ಗರ್ಭ ಧರಿಸಲು ರೆಡಯಾಗಿರುತ್ತವೆ. ಹೆಣ್ಣು ಕಡಲ ಕುದುರೆಗೆ ಮತ್ತೆ ಮಿಲನ ಮಹೋತ್ಸವ ನಡೆಸಬೇಕು ಅನಿಸಿದರೆ ಗಂಡನ್ನು ಹುಡುಕಿಕೊಂಡು ಬರುತ್ತದೆ. ಇಲ್ಲಿ ಗಂಡಿಗೆ ನಿರಂತರವಾಗಿ ಗರ್ಭ ಧರಿಸುವುದು, ಜನ್ಮ ನೀಡುವುದು ಇಷ್ಟೇ ಕೆಲಸ.

    ಉಷ್ಣ ಮತ್ತು ಸಮಶೀತೋಷ್ಣವಲಯಗಳ ಸಮುದ್ರದ ತೀರಪ್ರದೇಶದಲ್ಲಿ ವಾಸಿಸುವ ಈ ಮೀನಿನ ವೈಜ್ಞಾನಿಕ ಹೆಸರು ಹಿಪ್ಪೊಕ್ಯಾಂಪಸ್.. ಆದರೆ ಇದರ ತಲೆ ಕುದುರೆ ರೀತಿ ಕಾಣುವುದರಿಂದ ಇದಕ್ಕೆ ಸೀ ಹಾರ್ಸ್‍ ಅಂತ ಕರೆಯವುದು ರೂಢಿಗೆ ಬಂದಿದೆ. 2 ರಿಂದ 5 ಸೆಂಟಿಮೀಟರ್‍ನಷ್ಟು ಬೆಳೆಯುವ ಈ ಮೀನು 1 ರಿಂದ 5 ವರ್ಷ ಬದುಕುತ್ತದೆ.

Leave a Reply

 

%d bloggers like this: