You cannot copy content of this page.
. . .

ಬ್ರಹ್ಮ ರಥೋತ್ಸವ; ಜೆಡಿಎಸ್ ತಾಪಂ ಸದಸ್ಯ, ಬಿಜೆಪಿ ಶಾಸಕನ ಬೆಂಬಲಿಗರ ನಡುವೆ ಗಲಾಟೆ

 ಮಂಡ್ಯ ಜಿಲ್ಲೆಯ ಬಿಲ್ಲೇನಹಳ್ಳಿ ಗ್ರಾಮದಲ್ಲಿರುವ ಗವಿರಂಗಪ್ಪ ದೇವಾಲಯದಲ್ಲಿ ಬ್ರಹ್ಮ ರಥೋತ್ಸವ ನಡೆಯುತ್ತಿದ್ದ ವೇಳೆ ತಾಲ್ಲೂಕು ಪಂಚಾಯಿತಿ ಜೆಡಿಎಸ್‍ ಸದಸ್ಯ ದಿನೇಶ್‍ ಹಾಗೂ ಕೆ.ಆರ್‍.ಪೇಟೆ ಕ್ಷೇತ್ರದ ಬಿಜೆಪಿ ಶಾಸಕ ನಾರಾಯಣಗೌಡ ಬೆಂಬಲಿಗರ ನಡುವೆ ಗಲಾಟೆಯಾಗಿದೆ.

 ರಥೋತ್ಸವದ ವೇಳೆ ಮೊದಲು ಪೂಜೆ ಮಾಡುವುದಕ್ಕೆ ತಾಪಂ ಸದಸ್ಯ ದಿನೇಶ್‍ ಮುಂದಾದರು. ಅದಕ್ಕೆ ಶಾಸಕ ನಾರಾಯಣಗೌಡ ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು. ಈ ನಡುವೆ ಪರಸ್ಪರರಲ್ಲಿ ಗಲಾಟೆಯಾಗಿ ಹೊಡೆದಾಟದ ಹಂತಕ್ಕೆ ತಲುಪಿತ್ತು. ತಕ್ಷಣ ಸ್ಥಳದಲ್ಲೇ ಇದ್ದ ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

 

%d bloggers like this: