You cannot copy content of this page.
. . .

ನಿಂಬೆಹಣ್ಣು, ಆಲೂಗೆಡ್ಡೆಯಿಂದ ವಿದ್ಯುತ್ ಉತ್ಪಾದನೆ..!

 ಮೈಸೂರು: ಅಡುಗೆಗೆ ಬಳಕೆಯಾಗುತ್ತಿದ್ದ ಆಹಾರ ಪದಾರ್ಥಗಳು ವಿದ್ಯುತ್‍ ಉತ್ಪಾದನೆಗೆ ಬಳಕೆಯಾಗುವುದನ್ನು ಎಲ್ಲಾದರೂ ನೋಡಿದ್ದೀರಾ? ಈ ಮಾತು ಕೇಳಿ ನಿಮಗೆ ಅಚ್ಚರಿಯಾಗದೇ ಇರದು. ಹೌದು, ಇಂಥದ್ದೊಂದು ವಿಶೇಷ ಸಂಶೋಧನೆಯನ್ನು ವಿದ್ಯಾರ್ಥಿಗಳು ಮಾದರಿ ರೂಪದಲ್ಲಿ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

 ಮಕ್ಕಳು ನಿಂಬೆಹಣ್ಣು, ಆಲೂಗೆಡ್ಡೆಯನ್ನು ಬಳಸಿ ವಿದ್ಯುತ್‍ ಉತ್ಪಾದಿಸಿ ಅದಕ್ಕೆ ‘ವಿದ್ಯುತ್‍ ಕೋಶ’ ಎಂದು ಹೆಸರಿಟ್ಟಿದ್ದಾರೆ. ಇದರೊಂದಿಗೆ ಕಾಲಚಕ್ರವನ್ನು ಕೊಡೆಯ ರೂಪದಲ್ಲಿ ಚಿತ್ರಣ, ದೇಹದ ಅಂಗಾಂಗ ಮಾದರಿ ರೂಪಿಸುವ ಮೂಲಕ ವಿಜ್ಞಾನ ಲೋಕವನ್ನೇ ಅನಾವರಣಗೊಳಿಸಿದ್ದಾರೆ.

 ಮೈಸೂರು ತಾಲ್ಲೂಕಿನ ಹಡಜನ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಮಂಗಳವಾರ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ವಿಜ್ಞಾನ ಮಾದರಿ ಕಲಾಪ್ರದರ್ಶನದಲ್ಲಿ ಈ ದೃಶ್ಯ ಕಂಡುಬಂದಿತು.

 ಸುತ್ತಮುತ್ತಲಿನ ಪರಿಸರದಲ್ಲಿ ವಾತಾವರಣ ಬದಲಾವಣೆ, ಆಹಾರ ಸರಪಳಿಯ ಕ್ರಮ, ಬದಲಾಗುವ ಕಾಲ ಹೀಗೆ ಮೂಲವಿಜ್ಞಾನ ಕುರಿತು ಪುಟ್ಟ ಮಕ್ಕಳು ವಸ್ತು ಹಾಗೂ ಕಲೆಯ ಮೂಲಕ ಕಟ್ಟಿಕೊಟ್ಟಿದ್ದು ವಿಶೇಷವಾಗಿತ್ತು. ಮಾದರಿ ವೀಕ್ಷಣೆಗೆ ಬರುವವರಿಗೆಲ್ಲ ಪುಟ್ಟ ವಿಜ್ಞಾನಿಗಳಂತೆ ವಿಶ್ಲೇಷಣೆ ಮಾಡುತ್ತಿದ್ದರು. ಸುಮಾರು ೨೦ಕ್ಕೂ ಹೆಚ್ಚು ಬಗೆಯ ಕಲ್ಲುಗಳು, ಸೂಜಿ ಬಿಂಬ ಗ್ರಾಹಕ, ಮಾನವನ ದೇಹದ ಮಾದರಿ, ಮಿದುಳು, ದವಡೆ, ಸೇರಿದಂತೆ ಮಕ್ಕಳೇ ತಯಾರಿಸಿದ ೨೨ ವಿಜ್ಞಾನ ಮಾದರಿಗಳು ಪ್ರದರ್ಶನಗೊಂಡವು.

 

%d bloggers like this: