You cannot copy content of this page.
. . .

ಕೆಪಿಸಿಸಿಗೆ 4 ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿಗೆ ಚಿಂತನೆ ನಡೆದಿದೆ; ಸತೀಶ್‍ ಜಾರಕಿಹೊಳಿ

ಕೆಪಿಸಿಸಿಗೆ ನಾಲ್ಕು ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿಗೆ ಚಿಂತನೆ ನಡೆದಿದೆ. ಜಾತಿ ಮತ್ತು ಪ್ರದೇಶವಾರು ಸಮತೋಲನ ಮಾಡುವುದಕ್ಕಾಗಿ ಈ ಚಿಂತನೆ ನಡೆದಿದೆ ಎಂದು ಮಾಜಿ ಸಚಿವ ಸತೀಶ್‍ ಜಾರಕಿಹೊಳಿ ಹೇಳಿದರು.

 ಇನ್ನು ಒಂದು ವಾರದಲ್ಲಿ ಎಲ್ಲವೂ ಸರಿಯಾಗಲಿದೆ. ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ವಿಳಂಬ ಆಗಿದೆ ಅಷ್ಟೇ. ಕಾಂಗ್ರೆಸ್‌ನಲ್ಲಿ ಮೂಲ ವಲಸಿಗ ಎಂಬ ಪ್ರಶ್ನೆಯೇ ಇಲ್ಲ. ನಾವು ಪಕ್ಷ ಸೇರಿ 10 ವರ್ಷವಾಗಿದೆ‌. ಈಗ ಆ ವಿಚಾರವೂ ಚರ್ಚೆಗೆ ಅನಗತ್ಯ. ವಿಪಕ್ಷ ನಾಯಕ, ಶಾಸಕಾಂಗ ಪಕ್ಷದ ಅಧ್ಯಕ್ಷ ಒಂದೇ ಇರಲಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

 ಇಂಥ ಪರಿಸ್ಥಿತಿ ಬರುತ್ತದೆ ಅಂತ ಮೊದಲೇ ಹೇಳಿದ್ದೆ. ಕೆಲವರು ಸಚಿವರಾಗಲು ಒಂದು ವರ್ಷದಿಂದ ಕಾಯುತ್ತಿದ್ದಾರೆ ಎಂದು ರಮೇಶ್‍ ಜಾರಕಿಹೊಳಿ ಸೇರಿದಂತೆ ಉಪಚುನಾವಣೆಯಲ್ಲಿ ಗೆದ್ದ ಸಚಿವ ಸ್ಥಾನ ಆಕಾಂಕ್ಷಿ ಶಾಸಕರಿಗೆ ಮಾಜಿ ಸಚಿವ ಸತೀಶ್‍ ಜಾರಕಿಹೊಳಿ ವ್ಯಂಗ್ಯವಾಡಿದರು.

 ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಸಮ್ಮಿಶ್ರ ಸರ್ಕಾರ ಬಂದಾಗಿನಿಂದಲೂ ಸಚಿವ ಸ್ಥಾನಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಈಗ ಸಚಿವರಾಗಲು ಕಾಯುತ್ತಿದ್ದಾರೆ. ಸಿಎಂ ಯಡಿಯೂರಪ್ಪ ವಿದೇಶದಿಂದ ಬಂದ ಕೂಡಲೇ ಅವರ ಆಸೆ ಈಡೇರಿಸಲಿ. ಅವರು ಬೇಗ ಸಚಿವರಾದರೆ ಒಳ್ಳೆಯದು. ಅವರು ಸಚಿವರಾಗಲೆಂದು ಹಾರೈಸುತ್ತೇನೆ ಎಂದು ಛೇಡಿಸಿದರು.

 

%d bloggers like this: