You cannot copy content of this page.
. . .

   ಮಹಾ ಅಂದ್ರೆ ಜೇಡ ಎಷ್ಟು ಗಾತ್ರ ಇರಬಹುದು.. ಅಂಗೈಯಷ್ಟು ಗಾತ್ರಕ್ಕಿಂತ ಜಾಸ್ತಿ ಇರೋಕೆ ಸಾಧ್ಯನೇ ಇಲ್ಲ ಬಿಡಿ.. ಅಷ್ಟು ದೊಡ್ಡ ಜೇಡದ ವಿಷಯ ಪಕ್ಕಕ್ಕಿರಲಿ.. ನಾವು ನೀವು ನೋಡಿರುವ ತೀರಾ ಸಣ್ಣ ಗಾತ್ರದ ಜೇಡವೇ ಒಂದು ಹಾವನ್ನು ತಿಂದು ಮುಗಿಸುತ್ತೆ ಅಂದ್ರೆ ನಂಬೋದು ಸ್ವಲ್ಪ ಕಷ್ಟಾನೇ.. ಆದ್ರೆ, ಅದು ಹಾವು, ಪಕ್ಷಿ, ಹಲ್ಲಿ ಹೀಗೆ ದೊಡ್ಡ ದೊಡ್ಡ ಪ್ರಾಣಿಗಳನ್ನೇ ಸ್ವಾಹ ಮಾಡುತ್ತೆ ಅನ್ನೋದಕ್ಕೆ ಎಷ್ಟು ಸಾಕ್ಷಿಗಳು ಬೇಕಾದ್ರೂ ಸಿಕ್ತವೆ..

  ರೆಡ್‍ಬ್ಯಾಕ್‍.. ಇದು ಆಸ್ಟ್ರೇಲಿಯಾದಲ್ಲಿ ಕಂಡುಬರೋ ಜೇಡದ ಪ್ರಬೇಧ.. ಸಾಮಾನ್ಯ ಗಾತ್ರದಲ್ಲೇ ಇರುವ ಈ ಜೇಡ ದೊಡ್ಡ ದೊಡ್ಡ ಪ್ರಾಣಿಗಳಿಗೇ ಜಾಸ್ತಿ ಸ್ಕೆಚ್‍ ಹಾಕೋದು.. ಅದೂ ವಿಷಪೂರಿತ ಹಾವುಗಳನ್ನೇ ಕೊಂದು ತಿಂದುಬಿಡುತ್ತೆ.. ಈಸ್ಟರ್ನ್‍ ಬ್ರೌನ್‍ ಎಂಬ ವಿಷಪೂರಿತ ಹಾವನ್ನೇ ರೆಡ್‍ಬ್ಯಾಕ್‍ ಜೇಡವೊಂದು ಸಾಯಿಸಿದ್ದು, ಈ ದೃಶ್ಯ ಇತ್ತಿಚೆಗೆ ಸೆರೆಯಾಗಿತ್ತು. ಜೇಡ ಹೆಣೆದಿದ್ದ ಬಲೆಗೆ ಸಿಕ್ಕಿಕೊಂಡ ದೊಡ್ಡ ಗಾತ್ರದ ಹಾವಿನ ಮೇಲೆ ದಾಳಿ ಮಾಡಿದ ರೆಡ್‍ ಬ್ಯಾಕ್‍, ಕಚ್ಚಿ ಸಾಯಿಸಿತ್ತು.. ಇದೇ ರೀತಿ ಹಲ್ಲಿ, ಹಕ್ಕಿಗಳು, ಮೀನುಗಳನ್ನು ಕೂಡಾ ಈ ರೆಡ್‍ಬ್ಯಾಕ್‍ ಜೇಡ ಬೇಟೆಯಾಡುತ್ತೆ.. ಕರಾರುವಾಕ್ಕಾಗಿ ದಾಳಿ ಮಾಡಿ, ತನ್ನ ಆಹಾರವನ್ನು ಗಿಟ್ಟಿಸಿಕೊಳ್ಳುತ್ತೆ..  

   ಆಲ್ಫಾ ಲ್ಯಾಟ್ರೋಟಾಕ್ಸಿನ್ ಎಂಬ ವಿಷ ರೆಡ್‍ಬ್ಯಾಕ್‍ ಜೇಡದ ದೇಹದಲ್ಲಿದೆ.. ಹೀಗಾಗಿ ಅದು ಕಚ್ಚಿದ ತಕ್ಷಣ ಎಷ್ಟೇ ದೊಡ್ಡ ಪ್ರಾಣಿಗಳಾದರೂ ಸಾಯುತ್ತವೆ.. ನಂತರ ಅದು ಹೊಟ್ಟೆ ತುಂಬಿಸಿಕೊಳ್ಳುತ್ತದೆ..  ಯಾಕಂದ್ರೆ ರೆಡ್‍ಬ್ಯಾಕ್‍ ಮಾಂಸಾಹಾರಿ ಜೇಡ.. ಅದಕ್ಕೇ ಅದು ರುಚಿರುಚಿಯಾದ ಮಾಂಸಾಕ್ಕಾಗಿ ಯಾವಾಗಲೂ ತಡಕಾಡುತ್ತಿರುತ್ತದೆ.. ಬೇರೆ ಬೇರೆ ಪ್ರಾಣಿಗಳಿಗೆ ಬಲೆಬೀಸುತ್ತಿರುತ್ತದೆ..

   ಇನ್ನು ಇದೇ ಜಾತಿಯ ಇನ್ನೊಂದು ಜೇಡಕ್ಕೆ ಮೀನುಗಳಂದ್ರೆ ಪಂಚಪ್ರಾಣ.. ಇದು ಯಾವಾಗಲೂ ನೀರಿನ ಮೇಲೇ ಓಡಾಡುತ್ತಿರುತ್ತದೆ.. ನೀರಿನ ಸಣ್ಣ ಕಂಪನಗಳು ಕಂಡುಬಂದಾಗ ಅಲ್ಲಿ ಈ ಜೇಡ ಪ್ರತ್ಯಕ್ಷವಾಗುತ್ತದೆ.. ನೀರಿನ ಕಂಪನವಾಗುತ್ತಿದೆ ಅಂದರೆ ಅಲ್ಲಿ ಸಣ್ಣ ಸಣ್ಣ ಮೀನುಗಳಿವೆ ಎಂದು ಅದಕ್ಕೆ ತಿಳಿಯುತ್ತದೆ.. ಹೀಗಾಗಿ ಅದು ಆರಾಮಾಗಿ ತನ್ನ ಬೇಟೆಯನ್ನು ಮುಗಿಸುತ್ತದೆ.. ಸಾಧ್ಯವಾದರೆ ತನ್ನ ನೂಲಿನ ಸಹಾಯದಿಂದ ನೀರಿನ ಮೇಲೆ ಜೇಡ ನಡೆದುಕೊಂಡೂ ಹೋಗುತ್ತದೆ.. ಸಿಕ್ಕ ಪುಟ್ಟ ಪುಟ್ಟ ಮೀನುಗಳು, ಕೀಟಗಳನ್ನು ಅದು ಸ್ವಾಹಾ ಮಾಡಿಬಿಡುತ್ತದೆ..

  ಇನ್ನು ಈ ಜೇಡ ನೀರಿನಲ್ಲಿ ಸ್ಕೂಬಾ ರೀತಿಯಲ್ಲೇ ಡೈವ್‍ ಹೊಡೆಯುತ್ತೆ.. ನೀರಿನಾಳದಲ್ಲಿ ಕೂಡಾ ಇದು ಬೇಟೆಯಾಡುತ್ತೆ.. ಯಾವ ಮಟ್ಟಿಗೆ ಅಂದ್ರೆ ಇದು 1 ಗಂಟೆವರೆಗೆ ನೀರಿನಾಳದಲ್ಲಿ ಸಂಚಾರ ಮಾಡುವ ಸಾಮರ್ಥ್ಯ ಹೊಂದಿದೆ.. ನೀರಿನ ಬುಗ್ಗೆಗಳನ್ನು ಹೊರಬಿಡುತ್ತಾ ಉಸಿರಾಡುವ ಇದು, ತನ್ನ ಗಾತ್ರಕ್ಕಿಂತ 50 ಪಟ್ಟು ದೊಡ್ಡದಾದ ಪ್ರಾಣಿಗಳನ್ನೂ ಬೇಟೆಯಾಡುತ್ತದೆ..  

 

%d bloggers like this: