You cannot copy content of this page.
. . .

 ಮೂವರು ಅಪರಿಚಿತರು ಬೈಕ್‍ ಅಡ್ಡಗಟ್ಟಿ ಸವಾರನಿಗೆ ಚಾಕುವಿನಿಂದ ಇರಿದು 5 ಲಕ್ಷ ರೂಪಾಯಿ ನಗದು ಹಾಗೂ 65 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಪಾಂಡವಪುರ ತಾಲ್ಲೂಕಿನ ಶಂಭೂನಹಳ್ಳಿ ಗ್ರಾಮದಲ್ಲಿ ನಡೆದಿದೆ.

 ಪಾಂಡವಪುರ ಟೌನ್ ನಿವಾಸಿ ಜಂಬೂ ಜೈನ್ ಎಂಬುವವರೇ ಹಣ ಕಳೆದುಕೊಂಡವರು. ಚಿನಕುರಳಿಯಲ್ಲಿ ಚಿನ್ನ ವ್ಯಾಪಾರಿಯಾಗಿರುವ ಜಂಬೂ ಜೈನ್ ಎಂದಿನಂತೆ ವ್ಯಾಪಾರ ಮುಗಿಸಿ ಸಂಜೆ 6 ಗಂಟೆಗೆ ಪಲ್ಸರ್ ಬೈಕ್ ನಲ್ಲಿ ಪಾಂಡವಪುರಕ್ಕೆ  ಬರುತ್ತಿದ್ದರು. ಈ ವೇಳೆ ಮೂವರು ಅಪರಿಚಿತರು ಬೈಕ್ ಅಡ್ಡಗಟ್ಟಿದ್ದಾರೆ. ನಂತರ ಜಂಬೂ ಜೈನ್‍ ರನ್ನು ಚಾಕುವಿನಿಂದ ಇರಿದು, ಹಣ ಹಾಗೂ ಚಿನ್ನಾಭರಣವನ್ನು ದೋಚಿದ್ದಾರೆ.

 

%d bloggers like this: