You cannot copy content of this page.
. . .

ಚಿಲ್ಲರೆ ಹಣದುಬ್ಬರ 7.35ಕ್ಕೆ ಏರಿಕೆ: ದೇಶದ ಆರ್ಥಿಕತೆ ಗಂಭೀರ

  ಕೇಂದ್ರೀಯ ಸಾಂಖ್ಯಿಕ ಕಚೇರಿ ಇಂದು ದೇಶದ ಆರ್ಥಿಕತೆ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಚಿಲ್ಲರೆ ಹಣದುಬ್ಬರ 2019ರ ಡಿಸೆಂಬರ್‌ನಲ್ಲಿ ಶೇ.7.35ಕ್ಕೆ ಏರಿಕೆಯಾಗಿದೆ. ಇದು ಕಳೆದ 6 ವರ್ಷಗಳಲ್ಲೇ ಅತಿ ಹೆಚ್ಚು ಎಂದು ತಿಳಿದುಬಂದಿದೆ.

  ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಆಧಾರದ ಮೇಲೆ ಲೆಕ್ಕ ಹಾಕುವ ಚಿಲ್ಲರೆ ಹಣದುಬ್ಬರ 6 ವರ್ಷಗಳಲ್ಲಿ ಗರಿಷ್ಟ ಮಟ್ಟ ತಲುಪಿದೆ. ಈ ಹಿಂದೆ 2016ರ ಜುಲೈನಲ್ಲಿ ಶೇ.6.07 ರಷ್ಟು ದಾಖಲಾಗಿತ್ತು. 2019ರ ನವೆಂಬರ್‌ನಲ್ಲಿ ಶೇ.5.54ರಷ್ಟಿತ್ತು. ಆದರೆ 2019ರ ಡಿಸೆಂಬರ್‍ ತಿಂಗಳಲ್ಲಿ ಅದು ಶೇ.7.35ಕ್ಕೆ ಏರಿಕೆಯಾಗಿದೆ. 

  ದೇಶದ ಆರ್ಥಿಕತೆಯು ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದೆ ಎನ್ನುವುದನ್ನು ಚಿಲ್ಲರೆ ಹಣದುಬ್ಬರ ಅಂಕಿ–ಅಂಶಗಳು ಮತ್ತೆ ಸ್ಪಷ್ಟಪಡಿಸಿವೆ. ಕೇಂದ್ರ ಸರ್ಕಾರದ ಅಂಕಿ–ಅಂಶಗಳ ಪ್ರಕಾರ, 2019ರ ನವೆಂಬರ್‌ನಲ್ಲಿ ಶೇ 10.01ರಷ್ಟಿದ್ದ ಆಹಾರ ಪದಾರ್ಥಗಳ ಬೆಲೆ ಏರಿಕೆ ಡಿಸೆಂಬರ್‌ನಲ್ಲಿ ಶೇ 14.12ರಷ್ಟಾಗಿದೆ.

 

Leave a Reply

 

%d bloggers like this: