You cannot copy content of this page.
. . .

RCBಗೆ ಹೊಸ ಲಾಂಛನ; ಈಗಲಾದರೂ ಕಪ್‍ ನಮ್ಮದಾಗುತ್ತಾ..?

    ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಹೊಸ ಲಾಂಛನದ ಬಿಡುಗಡೆ ಮಾಡಿದೆ. ಈ ಮೂಲಕ ನಿನ್ನೆಯಿಂದ ಎದ್ದಿದ್ದ ಎಲ್ಲ ಊಹಾಪೋಹಾಗಳಿಗೂ ತೆರೆ ಎಳೆಯಲಾಗಿದೆ.

   ನಿನ್ನೆ (ಗುರುವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾಮಾಜಿಕ ಜಾಲತಾಣ ಖಾತೆಗಳಿಂದ ಲೋಗೋ ಹಾಗೂ ಪೋಸ್ಟ್‌ಗಳು ಕಣ್ಮರೆಯಾಗಿದ್ದವು. ಇದರಿಂದಾಗಿ RCB ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಅಷ್ಟೇ ಅಲ್ಲ, ತಂಡ  ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಮೈಕ್ ಹೆಸ್ಸನ್ ಗೂ ಇದು ಗೊತ್ತಿರಲಿಲ್ಲ. ಈಗ ಆತಂಕ ಮರೆಯಾಗಿದೆ. ಪ್ರೇಮಿಗಳ ದಿನದಂದೇ ಹೊಸ ಲಾಂಛನ ರಿಲೀಸ್‍ ಆಗಿದೆ.

   ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಿಡುಗಡೆ ಮಾಡಿರುವ ಹೊಸ ಲಾಂಛನ ಕೆಂಪು ಹಿನ್ನೆಲೆ ಹೊಂದಿದೆ. ಗೋಲ್ಡನ್ ಲಯನ್ ಮತ್ತು ಕಪ್ಪು ಬಣ್ಣದಲ್ಲಿ ತಂಡದ ಹೆಸರನ್ನು ಬರೆಯಲಾಗಿದೆ. ಹೊಸ ಲೋಗೋದಲ್ಲಿ ಕಿರೀಟ ತೊಟ್ಟ ಸಿಂಹವನ್ನು ಕಾಣಬಹುದು.

Leave a Reply

 

%d bloggers like this: