You cannot copy content of this page.
. . .

ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ಟ್ಯಾಕ್ಸಿ ಮೂಲಕ ಆಗಮಿಸಿದ ಅಧಿಕಾರಿಗಳು ನಟಿ ಕುಟುಂಬಸ್ಥರಿಗೆ ಶಾಕ್ ನೀಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ವಿರಾಜಪೇಟೆ ಪಟ್ಟಣದಲ್ಲಿ ಸೆರೆನಿಟ್ ಹಾಲ್ ಹೊಂದಿದ್ದು, ಅದರ ಕಛೇರಿ ಹಾಗೂ ವಿರಾಜಪೇಟೆಯ ಮನೆಯ ಮೇಲೆ ಏಕಕಾಲಕ್ಕೆ ದಾಳಿ‌ ನಡೆಸಲಾಗಿದೆ.‌ 

10ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಮನೆಯಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತಿದೆ. ಶೂಟಿಂಗ್ ಗಾಗಿ ಸದ್ಯ ರಶ್ಮಿಕಾ ಮನೆಯಲ್ಲಿಲ್ಲ. ಸ್ಯಾಂಡಲ್‍ವುಡ್ ಮತ್ತು ಟಾಲಿವುಡ್ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಮನೆ ಮಾತಾಗಿರುವ ರಶ್ಮಿಕಾ ಮಂದಣ್ಣ ಆದಾಯದಲ್ಲಿ ಹೆಚ್ಚಳವಾಗಿದೆ. ಹಾಗಾಗಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

 ರಶ್ಮಿಕಾ ಮಂದಣ್ಣ ‘ಕಿರಿಕ್‍ ಪಾರ್ಟಿ’ (ಕನ್ನಡ) ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಕನ್ನಡದ ‘ಅಂಜನಿಪುತ್ರ’, ‘ಚಮಕ್’,‍ ‘ಯಜಮಾನ’ ಹಾಗೂ ತೆಲುಗಿನ ‘ಚಲೊ’, ‘ಗೀತಾಗೋವಿಂದ’, ‘ದೇವದಾಸ’, ‘ಸರಿಲೇರು ನೀಕೆವ್ವರು’ ಸಿನಿಮಾಗಳಲ್ಲಿ ನಟಿಸಿದ್ದಾರೆ.   

 ಸಿನಿಮಾ ಶೂಟಿಂಗ್‍ನಲ್ಲಿ ಹೆಚ್ಚು ಬಿಸಿ ಆಗಿರುವ ನಟಿಯೂ ಆಗಿದ್ದಾರೆ. ನಟ ಧ್ರುವ ಸರ್ಜಾ ಜೊತೆಗೆ ನಟಿಸಿರುವ ‘ಪೊಗರು’ ಚಿತ್ರ ಬಿಡುಗಡೆ ಹಂತದಲ್ಲಿದೆ. ‘ಭೀಷ್ಮಾ’, ಸುಲ್ತಾನ್’, ‘ಎಎ 20’ ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿವೆ.

Leave a Reply

 

%d bloggers like this: