ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೇರಳದ ವಿಶಿಷ್ಟ ಅಭಿಮಾನಿಯನ್ನು ಮನೆಗೆ ಕರೆಸಿಕೊಂಡು ಪಾದಸ್ಪರ್ಶ ಮಾಡಿದ್ದಾರೆ. ಕೇರಳದ ಪಾಲ್ಘಾಟ್ ನಿವಾಸಿ 21 ವರ್ಷದ ಪ್ರಣವ್ ಗೆ ಎರಡೂ ಕೈಗಳಿಲ್ಲ. ಆದರೂ ಚಿತ್ರಕಲೆ ಸೇರಿ ಹಲವು ಕಲೆಗಳಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಪ್ರಣವ್ ಅವರು ರಜನಿಕಾಂತ್ ಅವರ ದೊಡ್ಡ ಅಭಿಮಾನಿಯಂತೆ. ಈ ವಿಷಯ ತಿಳಿದ ರಜನಿಕಾಂತ್ ಅವರು ಪ್ರಣವ್ ಹಾಗೂ ಅವರ ಕುಟುಂಬಕ್ಕೆ ಟಿಕೆಟ್ ಬುಕ್ ಮಾಡಿಸಿ ಚೆನ್ನೈಗೆ ಕರೆಸಿಕೊಂಡಿದ್ದರು. ಪೋಯಿಸ್ ಗಾರ್ಡನ್ ನಲ್ಲಿರುವ ನಿವಾಸದಲ್ಲಿ ಭೇಟಿಯಾದ ಪ್ರಣವ್, ರಜನಿಕಾಂತ್ ಅವರಿಗೆ ಅವರದೇ ಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಈ ವೇಳೆ ರಜನಿಕಾಂತ್ ಅವರು ಪ್ರಣವ್ ಅವರ ಕಾಲಿನ ಸ್ಪರ್ಶ ಮಾಡಿದರು.