You cannot copy content of this page.
. . .

ಬಂಡೀಪುರ ಅರಣ್ಯದಲ್ಲಿ ಪ್ರಾಣಿಗಳ ಬೆನ್ನತ್ತಿದ ರಜನಿಕಾಂತ್

   ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಡಿಸ್ಕವರಿ ಚಾನಲ್‍ ನ ಕಾರ್ಯಕ್ರಮಕ್ಕಾಗಿ ಕಾಡು ಹೊಕ್ಕಿದ್ದನ್ನು ನೋಡಿದ್ದೀರಿ.. ಆ ಕಾರ್ಯಕ್ರಮದಲ್ಲಿ ಮೋದಿಯವರು ಹೇಳಿದ ತಾವು ಚಿಕ್ಕವರಿದ್ದಾಗ ಮೊಸಳೆ ಮರಿ ಹಿಡಿದ ಕಥೆಯನ್ನೂ ಕೇಳಿದ್ದೀರಿ.. ಈಗ ಅದೇ ಕಾರ್ಯಕ್ರಮಕ್ಕಾಗಿ ಖ್ಯಾತ ನಟ ರಜನಿಕಾಂತ್‍ ಬಂಡೀಪುರ ಅರಣ್ಯದಲ್ಲಿ ಸುತ್ತಾಟ ಶುರು ಮಾಡಿದ್ದಾರೆ.

  ಬ್ರಿಟೀಷ್‍ ಸಾಹಸಿ ಬೇರ್‍ ಗ್ರಿಲ್ಸ್ ದಟ್ಟಾರಣ್ಯಗಳಲ್ಲಿ ಸುತ್ತಾಡಿ ವನ್ಯಪ್ರಾಣಿಗಳ ಬಗ್ಗೆ ಕಾರ್ಯಕ್ರಮ ಮಾಡುತ್ತಾರೆ. ಈ ಕಾರ್ಯಕ್ರಮದ ಹೆಸರು ‘ಮ್ಯಾನ್‍ ವರ್ಸಸ್‍ ವೈಲ್ಡ್’. ಅತ್ಯಂತ ಜನಪ್ರಿಯವಾದ ಈ ಕಾರ್ಯಕ್ರಮದ ಎಪಿಸೋಡ್‍ ಒಂದರಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು. ಈ ರಜನಿಕಾಂತ್ ಸರದಿ. ಮೈಸೂರಿನ ಸಮೀಪದ ಬಂಡೀಪುರ ಅರಣ್ಯದಲ್ಲಿ ನಿನ್ನೆಯಿಂದ ಬೇರ್‍ ಗ್ರಿಲ್ಸ್ ಜೊತೆ ರಜಿನಿಕಾಂತ್ ಸುತ್ತಾಡುತ್ತಿದ್ದಾರೆ. ‘ಮ್ಯಾನ್‍ ವರ್ಸಸ್‍ ವೈಲ್ಡ್’ನ ಭಾಗವಾಗಿದ್ದಾರೆ. ಮೂರು ದಿನಗಳ ಕಾಲ ಕಾಡಿನಲ್ಲಿ ಚಿತ್ರೀಕರಣ ನಡೆಯುತ್ತದೆಂದು ತಿಳಿದುಬಂದಿದೆ.

 

%d bloggers like this: