You cannot copy content of this page.
. . .

ರಜನಿಕಾಂತ್‍ ಇದ್ದ ವಿಮಾನ ತಡವಾಗಿ ಮೈಸೂರಿನಲ್ಲಿ ಲ್ಯಾಂಡಿಂಗ್..!

  ತಮಿಳುನಟ , ಸೂಪರ್​ ಸ್ಟಾರ್​ ರಜನಿಕಾಂತ್​​ ಇಂದು ಬೆಳಗ್ಗೆ ಚೆನ್ನೈ ಮೂಲಕ ಮೈಸೂರಿಗೆ ಪ್ರಯಾಣಿಸುತ್ತಿದ್ದ ವಿಮಾನ ದಟ್ಟ ಮಂಜಿನ ಕಾರಣದಿಂದ ಒಂದುವರೆ ಗಂಟೆ ವಿಳಂಬವಾಗಿ ಲ್ಯಾಂಡಿಂಗ್ ಆದ ಘಟನೆ ನಡೆದಿದೆ.

  ನಟ ರಜನಿಕಾಂತ್ ಇಂದು ಬೆಳಗ್ಗೆ 6.50ಕ್ಕೆ ಚೆನ್ನೈನಿಂದ ಮೈಸೂರಿಗೆ ಖಾಸಗಿ ವಿಮಾನದ ಮೂಲಕ ಆಗಮಿಸುತ್ತಿದ್ದರು. ಈ ವಿಮಾನ ಬೆಳಗ್ಗೆ 8.10ಕ್ಕೆ ಮೈಸೂರಿನಲ್ಲಿ ಲ್ಯಾಂಡ್‍ ಆಗಬೇಕಿತ್ತು. ಆದರೆ ಮೈಸೂರು ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಆವರಿಸಿದ್ದ ಕಾರಣ, ಮುಂಜಾಗ್ರತ ಕ್ರಮವಾಗಿ ವಿಮಾನದ ಲ್ಯಾಂಡಿಂಗ್ ವಿಳಂಬ ಮಾಡಲು ಸೂಚಿಸಲಾಯಿತು. ಈ ಹಿನ್ನೆಲೆಯಲ್ಲಿ ನಟ ರಜನಿಕಾಂತ್, ಇತರ 42 ಮಂದಿ ಪ್ರಯಾಣಿಕರ ಜತೆ ವಿಮಾನದಲ್ಲೇ ಒಂದೂವರೆ ಗಂಟೆ ಕಾಲ ಕಳೆಯಬೇಕಾಯಿತು. ಈ ವೇಳೆ ಕೆಲ ಪ್ರಯಾಣಿಕರು ನೆಚ್ಚಿನ ನಟನ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಕಡೆಗೆ ವಿಮಾನ ನಿಲ್ದಾಣದ ತಾಂತ್ರಿಕ ಸಿಬ್ಬಂದಿ ಸೂಚನೆ ಸಿಕ್ಕ ಕೂಡಲೇ 9.30 ರ ಸುಮಾರಿಗೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಯಿತು.

  ಅಲ್ಲಿಂದ ಸೂಪರ್ ಸ್ಟಾರ್ ರಜನಿಕಾಂತ್ , ಮೈಸೂರಿನಿಂದ ನೇರವಾಗಿ ಬಂಡೀಪುರಕ್ಕೆ ಪಯಣ ಬೆಳೆಸಿದರು ಎಂದು ರಜನಿ ಆಪ್ತ ಮೂಲಗಳು ಮಾಹಿತಿ ನೀಡಿವೆ. ಬಂಡೀಪುರದಲ್ಲಿ ಚಿತ್ರೀಕರಣ ಕಾರಣಕ್ಕೋ ಅಥವಾ ವಿಶ್ರಾಂತಿ ಸಲುವಾಗಿ ತೆರಳಿದರೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇನ್ನು ಒಂದೆರೆಡು ದಿನಗಳ ಕಾಲ ರಜನಿಕಾಂತ್ , ಬಂಡೀಪುರದಲ್ಲೇ ವಾಸ್ತವ್ಯ ಹೂಡುವರು ಎಂಬುದಾಗಿ ತಿಳಿದು ಬಂದಿದೆ.

 

%d bloggers like this: