You cannot copy content of this page.
. . .

ಸಿಎಎ, ಎನ್‌ಆರ್‌ಸಿ ವಿರೋಧಿಸಿ ಬಿಜೆಪಿ ಸಂಸದರಿಗೆ ಗುಲಾಬಿ ಹೂ ನೀಡಿ ಪ್ರತಿಭಟನೆ

 ಮೈಸೂರು: ಎನ್‍.ಆರ್.ಸಿ, ಸಿಎಎ ವಿರೋಧಿಸಿ ದೇಶಾದ್ಯಂತ ನಾನಾ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಮಹಿಳಾ ಕಾಂಗ್ರೆಸ್ ಕೂಡ ವಿನೂತನ ರೀತಿಯಲ್ಲಿ ಪ್ರತಿಭಟನೆಗೆ ಮುಂದಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದರು.

 ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡು ಕಾಯ್ದೆಯನ್ನು ಜಾರಿಗೊಳಿಸಬಾರದು ಮತ್ತು ಮಹಿಳಾ ದೌರ್ಜನ್ಯ ನಿರ್ಮೂಲನೆ ಮಾಡುವಂತೆ  ಜ.೧ರಂದು ಬಿಜೆಪಿ ಸಂಸದರ ಮನೆಗಳಿಗೆ ಭೇಟಿ ನೀಡಿ, ಬಿಳಿ ಗುಲಾಬಿಯೊಂದಿಗೆ ಮನವಿ ಪತ್ರ ನೀಡುವ ಮೂಲಕ ಗಾಂಧಿ ಆಶಯದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಅಲ್ಲದೆ ರಾಜ್ಯಾದ್ಯಂತ ರಂಗೋಲಿ ಸ್ಪರ್ಧೆ ಮೂಲಕ ಪ್ರತಿಭಟಿಸಲು ಮುಂದಾಗಿರುವ ಮಹಿಳಾ ಕಾಂಗ್ರೆಸ್ ಮೊದಲ ರಂಗೋಲಿ ಪ್ರತಿಭಟನೆಯನ್ನು ಜ.೨ರಂದು ಮೈಸೂರಿನಲ್ಲಿ ನಡೆಸಲು ನಿರ್ಧಾರಿಸಲಾಗಿದೆ ಎಂದು ಹೇಳಿದರು.

 ಉತ್ತರ ಪ್ರದೇಶದಲ್ಲಿ ಪ್ರಿಯಾಂಕ ವಾದ್ರಾ ಅವರನ್ನು ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ. ಮಾಜಿ ಪ್ರಧಾನಿ‌‌ ಮೊಮ್ಮಗಳು, ರಾಷ್ಟ್ರೀಯ ಪಕ್ಷದ ಉನ್ನತ ಹುದ್ದೆ ಹಾಗೂ ಭಾವಿ ಪ್ರಧಾನಿ ಎಂದು ಬಿಂಬಿತವಾಗಿರುವ ಪ್ರಿಯಾಂಕ ಅವರ ವಿರುದ್ಧ ಸರ್ಕಾರವೇ ಪೊಲೀಸ್‍ಗಿರಿ ನಡೆಸಿರುವುದು ಸರಿಯಲ್ಲ. ಈ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಹೊರಬೇಕು. ಅಲ್ಲದೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

 ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ‌ವಿರುದ್ಧ ಸಂಸತ್‍ನಲ್ಲಿ ಧ್ವನಿ ಎತ್ತಬೇಕು. ಸರ್ಕಾರ ಮಹಿಳಾ ರಕ್ಷಣೆಗೆ ಕಟಿಬದ್ಧವಾಗಿರಬೇಕು. ಜ.೧ರಂದು ರಾಜ್ಯದ ೩೦ ಸಂಸದರ ಮನೆಗಳಿಗೂ ಮಹಿಳೆ ಕಾಂಗ್ರೆಸ್ ಕಾರ್ಯಕರ್ತರು ಭೇಟಿ ನೀಡಿ ಬಿಳಿ ಗುಲಾಬಿ ಜೊತೆ ಮನವಿ ಪತ್ರ ನೀಡುವ ಮೂಲಕ ಹೊಸ ವರ್ಷ ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು. ಸಿಎಎ ಮತ್ತು ಎನ್‍.ಆರ್.ಸಿ ಕಾಯ್ದೆಯನ್ನು ವಿರೋಧಿಸಿ ರಂಗೋಲಿ ಸ್ಪರ್ಧೆ ಏರ್ಪಡಿಸಿ ಆ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದರು.

 

%d bloggers like this: