You cannot copy content of this page.
. . .

ಯುವಕರ ಮೇಲೆ ಹಲ್ಲೆ ಆರೋಪ; ಪುರಸಭೆ ಸದಸ್ಯನ ಬಂಧನ

  ಯುವಕರಿಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಕೆ.ಆರ್‍.ನಗರದ ಪುರಸಭೆಯ ೧೯ನೇ ವಾರ್ಡಿನ ಕಾಂಗ್ರೆಸ್  ಸದಸ್ಯ ಸೈಯದ್ ಸಿದ್ದಿಖ್ ಅವರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.
   ನ.೧೨ರಂದು ತಾಲ್ಲೂಕಿನ ಮಂಚನಹಳ್ಳಿ ಗ್ರಾಮದ ಮಹದೇವ ಮತ್ತು ಮಹದೇಶ ಎಂಬವರ ಮೇಲೆ ಪಟ್ಟಣದ ರಸ್ತೆ ಸಾರಿಗೆ ನಿಗಮದ ಘಟಕದ ಮುಂದೆ ಸೈಯದ್ ಸಿದ್ದಿಖ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಹಲ್ಲೆಗೊಳಗಾದ ಯುವಕರ ಸ್ನೇಹಿತ ಬೀರೇಶ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೊಲೆ ಯತ್ನದಡಿ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

%d bloggers like this: