You cannot copy content of this page.
. . .

ಕುಲುಷಿತ ಆಹಾರ ಸೇವಿಸಿ ೪೦ ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೇಲೂರಿನಲ್ಲಿ ನಡೆದಿದೆ.
ಪಟ್ಟಣದ ಚೆನ್ನೇಗೌಡ ಬೀದಿಯ ಪ್ರಮೋದ್ ಎಂಬವರು ತಮ್ಮ ಗೃಹಪ್ರವೇಶಕ್ಕೆ ಕ್ಯಾಟರಿಂಗ್‌ ನೀಡಿ ಆಹಾರ ತರಿಸಿದ್ದರು. ಆಹಾರ ಸೇವಿಸಿದ ಸುಮಾರು ೪೦ ಮಂದಿ ಅಸ್ವಸ್ಥರಾಗಿದ್ದಾರೆ.

   ಅಸ್ವಸ್ಥರು ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಆಹಾರ ಸಂರಕ್ಷಣಾ ಅಧಿಕಾರಿ ನವೀನ್‌ಕುಮಾರ್, ಆಹಾರ ಪದಾರ್ಥಗಳನ್ನು ಪರಿಶೀಲಿಸಿ, ಭಾರದ್ವಾಜ್ ಕೆಟರಿಂಗ್ ಮಾಲೀಕ ಬಿ.ಜಿ.ರಾಘವೇಂದ್ರ ಭಾರದ್ವಾಜ್‌ಗೆ ನೋಟಿಸ್ ಜಾರಿ ಮಾಡಿದರು.  
     ಈಗಾಗಲೇ ಮನೆಯಲ್ಲಿದ್ದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದು, ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಡುಗೆ ತಯಾರಕರಿಗೂ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಪ್ರಯೋಗಾಲಯದಲ್ಲಿ ಕಲುಷಿತ ಆಹಾರವೆಂದು ದೃಢಪಟ್ಟರೆ ಆಹಾರ ಸಂರಕ್ಷಣೆ ಕಾಯ್ದೆಯಡಿ ಭಾರದ್ವಾಜ್ ಕೇಟರಿಂಗ್ ಮೇಲೆ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.


 

%d bloggers like this: