You cannot copy content of this page.
. . .

    ಕೃಷಿ ಮಾಡಿ ಲಕ್ಷದಲ್ಲಿ ಇರಲಿ, ಸಾವಿರದಲ್ಲೂ ಸಂಪಾದನೆ ಮಾಡುವುದಕ್ಕೆ ಆಗುವುದಿಲ್ಲ ಎಂಬುದು ರೈತರ ಅಳಲು. ಆದರೆ ಇಲ್ಲೊಬ್ಬ ರೈತ ಲಕ್ಷ ಅಲ್ಲ, ಕೋಟಿ ಲೆಕ್ಕದಲ್ಲಿ ಸಂಪಾದನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಒಂದೇ ಬೆಳೆಗೆ ಬರೋಬ್ಬರಿ 1 ಕೋಟಿ ರೂಪಾಯಿ ಲಾಭ ಸಂಪಾದಿಸಿದ್ದಾನೆ.

  ಚಿತ್ರದುರ್ಗ ತಾಲೂಕಿನ ದೊಡ್ಡ ಸಿದ್ದವ್ವನಹಳ್ಳಿ ಗ್ರಾಮದ ರೈತ ಮಲ್ಲಿಕಾರ್ಜುನ ಕೂಡಾ ಎಲ್ಲಾ ರೈತರಂತೆ ಹಲವಾರು ಬಾರಿ ಕೈಸುಟ್ಟುಕೊಂಡಿದ್ದಾರೆ. ಆದರೆ ಈ ಬಾರಿ ಮಲ್ಲಿಕಾರ್ಜುನ ಅವರಿಗೆ ಬಂಪರ್‍ ಲಾಟರಿ ಹೊಡೆದಿದೆ. 20 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದ ಮಲ್ಲಿಕಾರ್ಜುನ ಅವರು, ಈರುಳ್ಳಿ ಬೆಳೆ ಏರಿಕೆಯಿಂದಾಗಿ ಭರ್ಜರಿ ಆದಾಯ ಗಳಿಸಿದ್ದಾರೆ. 15 ಲಕ್ಷ ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದ ಈ ರೈತ ಖರ್ಚು ಹೋಗಿ 95 ಲಕ್ಷ ರೂಪಾಯಿಗೂ ಅಧಿಕ ಲಾಭ ಗಳಿಸಿದ್ದಾರಂತೆ.

 20 ಎಕರೆ ಜಮೀನಿನಲ್ಲಿ ಒಟ್ಟು 3,700 ಚೀಲ ಈರುಳ್ಳಿ ಬೆಳೆಯಲಾಗಿತ್ತು. ಬಹುತೇಕ ಈರುಳ್ಳಿ ಕೆಜಿ 100 ರೂಪಾಯಿವರೆಗೂ ಮಾರಾಟ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕ ಲಾಭ ಬಂದಿದೆ. ಈ ಬಗ್ಗೆ ಮಾತನಾಡಿರುವ ರೈತ, ಕಷ್ಟಪಟ್ಟಿದ್ದೇವೆ, ಆದ್ದರಿಂದ ಸುಖ ನಮ್ಮದಾಗಿದೆ ಎಂದು ಹೇಳಿದ್ದಾರೆ.

 

%d bloggers like this: