You cannot copy content of this page.
. . .

ನಾಳೆ ಮೈಸೂರಿನಲ್ಲಿ ಹೋಟೆಲ್‍ಗಳು ಮುಚ್ಚಲ್ಲ; ನಾರಾಯಣಗೌಡ

 ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಹಾಗೂ ಇತರೆ ಸಂಘಟನೆಗಳು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿವೆ. ಆದರೆ, ಮೈಸೂರಿನಲ್ಲಿ ನಾಳೆ ಹೋಟೆಲ್‍ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಮೈಸೂರು ಹೋಟೆಲ್‍ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ.

 ಮುಷ್ಕರಕ್ಕೆ ನಮ್ಮ ನೈತಿಕ ಬೆಂಬಲವಿದೆ. ಆದರೆ, ಪ್ರಸ್ತುತ ಹೋಟೆಲ್‍ ಉದ್ಯಮ ಅತಿ ಅವಶ್ಯದ್ದಾಗಿದೆ. ಹೀಗಾಗಿ, ನಾಳೆ ನಗರದ ಹೋಟೆಲ್‍ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

 

%d bloggers like this: