You cannot copy content of this page.
. . .

  2020 ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ಕೆಆರ್‍ಎಸ್‍ ಪೊಲೀಸ್‌ ಠಾಣೆ ವ್ಯಾಪ್ತಿಯ ಬಲಮುರಿ, ಎಡಮುರಿ ಹಾಗೂ ಕಾವೇರಿ ನದಿ ತೀರದ ಪ್ರದೇಶ ಸುತ್ತಮುತ್ತ ಡಿ.31 ಬೆಳಗ್ಗೆ 6 ರಿಂದ ಜ.1 ಸಂಜೆ 6 ರ ವರೆಗೆ ಜನರ ಪ್ರವೇಶ, ಹೊಸ ವರ್ಷಾಚರಣೆ ನಿಷೇಧಿಸಲಾಗಿದೆ.

  ಈ ಬಗ್ಗೆ ಹೇಳಿಕೆ ನೀಡಿರುವ ಶ್ರೀರಂಗಪಟ್ಟಣ ತಹಸೀಲ್ದಾರ್‍ ಎಂ.ವಿ. ರೂಪಾ, ಮೋಜು ಮಸ್ತಿ ನೆಪದಲ್ಲಿ ಪ್ರಾಣಹಾನಿ ಹಾಗೂ ಅಪರಾಧ ಚಟುವಟಿಕೆಗಳು ನಡೆಯುತ್ತವೆ. ಇವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

  ಹೊಸ ವರ್ಷಾಚರಣೆ ನೆಪದಲ್ಲಿ ಬಲಮುರಿ, ಎಡಮುರಿ ಹಾಗೂ ಕಾವೇರಿ ನದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮದ್ಯ ಸೇವನೆ, ಬಾಡೂಟ ಸಮಾರಾಧನೆ, ಮದ್ಯ ಸೇವಿಸಿ ನದಿಯಲ್ಲಿ ಈಜಾಡುವುದರಿಂದ ಅಪಾಯಗಳಾಗುವ ಸಾಧ್ಯತೆ ಇದೆ. ಕಳೆದ 6 ವರ್ಷಗಳಲ್ಲಿ 55 ಮಂದಿ ಮೃತಪಟ್ಟಿದ್ದಾರೆ. ಈ ಕಾರಣದಿಂದ ಜನರ ಪ್ರಾಣ ರಕ್ಷಣೆ, ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಯ ರಕ್ಷಣೆ ಮಾಡುವ ಉದ್ದೇಶದಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

%d bloggers like this: