You cannot copy content of this page.
. . .

 ಉಗ್ರರ ವಿರುದ್ಧ ಹೋರಾಟದ ಸಂದರ್ಭದಲ್ಲಿ ದೇಶದ ಸೈನಿಕರ ಆತ್ಮರಕ್ಷಣೆಗೆ ಭಾರತದ ಸೈನಿಕರ ಮಿಲಿಟರಿ ಎಂಜಿನಿಯರಿಂಗ್ ಕಾಲೇಜು ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ.

 ಕಾಲೇಜು ರೂಪಿಸಿರುವ ಹೊಸ ತಂತ್ರಜ್ಞಾನವು, ಶತ್ರುಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಹಾಗೂ ಆತ್ಮರಕ್ಷಣೆ ಮಾಡಿಕೊಳ್ಳಲು ಭಾರತೀಯ ಸೈನಿಕರಿಗೆ ಸಹಕಾರಿಯಾಗಲಿದೆ.

ಏನಿದು ಹೊಸ ತಂತ್ರಜ್ಞಾನ, ಅದರ ಪ್ರಯೋಜನಗಳೇನು?

 ಭಾರತದ ಸೈನಿಕರ ಮಿಲಿಟರಿ ಎಂಜಿನಿಯರಿಂಗ್ ಕಾಲೇಜು ವಿಶ್ವದಲ್ಲೇ ಮೊದಲ ಬಾರಿಗೆ ಸೈನಿಕರಿಗಾಗಿ ಹೆಲ್ಮೆಟ್‍ನ್ನು ಅಭಿವೃದ್ಧಿಪಡಿಸಿದೆ. ಇದು 10 ಮೀಟರ್‍ ದೂರದಿಂದ ಹೊಮ್ಮುವ ಎಕೆ-47 ಬುಲೆಟ್‍ನ್ನು ತಡೆದುಕೊಳ್ಳುವಷ್ಟು ಸಾಮರ್ಥ್ಯ ಹೊಂದಿದೆ. ಎದುರಾಳಿಯ ದಾಳಿಯಿಂದ ಸೈನಿಕ ರಕ್ಷಣೆ ಪಡೆದುಕೊಳ್ಳಲು ಇದು ಸಹಕಾರಿ. ಇದರ ತೂಕ ಕೇವಲ 1.4 ಕೆ.ಜಿ.ಯಷ್ಟೆ.

 ಅದೇ ರೀತಿ ‘ಗನ್‍ಶೂಟ್‍ ಲೊಕೇಟರ್’ ಅಭಿವೃದ್ಧಿಪಡಿಸಲಾದ ಮತ್ತೊಂದು ತಂತ್ರಜ್ಞಾನ. ಇದು ಭಾರತದಲ್ಲೇ ಮೊದಲು ಹಾಗೂ ವಿಶ್ವದಲ್ಲಿ ಅತೀ ಕಡಿಮೆ ಬೆಲೆಗೆ ಸಿಗಬಹುದಾದ ತಾಂತ್ರಿಕ ವಸ್ತುವಾಗಿದೆ. ದೂರದ ಸ್ಥಳದಲ್ಲಿ ನಿಂತು ಎದುರಾಳಿಯನ್ನು ಸುಲಭವಾಗಿ ಮಟ್ಟಹಾಕಲು ಇದು ಪೂರಕವಾಗಿದೆ.

 ಸುಮಾರು 400 ಮೀಟರ್ ದೂರದಲ್ಲಿ ನಿಂತು ಎದುರಾಳಿಯನ್ನು ನಿಖರವಾಗಿ ಗುರುತಿಸಿ ಗುಂಡುಹಾರಿಸಬಹುದು. ಈ ಲೊಕೇಟರ್ ಸಹಾಯದಿಂದ ಉಗ್ರರ ವೇಗದ ದಾಳಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ.   

Leave a Reply

 

%d bloggers like this: