You cannot copy content of this page.
. . .

  ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮುಖದ ತ್ವಚೆಯ ಕಾಂತಿಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ನಾನು ದಿನದಲ್ಲಿ ಸಾಕಷ್ಟು ಬಾರಿ ಬೆವರುತ್ತೇನೆ. ಅದರಿಂದ ನಾನು ಮುಖವನ್ನು ಮಸಾಜ್‍ ಮಾಡಿಕೊಳ್ಳುತ್ತೇನೆ. ಬೆವರು ನನ್ನ ಮುಖಕ್ಕೆ ಹೊಳಪು ನೀಡುತ್ತದೆ ಎಂದು ಮೋದಿ ಹೇಳಿದ್ದಾರೆ.

  ಪ್ರಧಾನಮಂತ್ರಿ ಬಾಲ ಪುರಸ್ಕಾರಕ್ಕೆ ಭಾಜನರಾದ 49 ಮಕ್ಕಳೊಂದಿಗೆ ಪ್ರಧಾನಿ ಮೋದಿ ಅವರು ತಮ್ಮ ನಿವಾಸದಲ್ಲಿ ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಮಕ್ಕಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಈ ವೇಳೆ ತಮ್ಮ ಹೊಳಪಿನ ತ್ವಚೆಯ ಗುಟ್ಟನ್ನೂ ಬಿಚ್ಚಿಟ್ಟಿದ್ದಾರೆ.
  ನಿಮ್ಮಲ್ಲಿ ಯಾರ್ಯಾರು ದಿನದಲ್ಲಿ ನಾಲ್ಕು ಬಾರಿಗಿಂತ ಹೆಚ್ಚು ಬೆವರುತ್ತೀರಿ ಎಂದು ಮಕ್ಕಳಿಗೆ ಮೋದಿ ಕೇಳಿದ್ದಾರೆ. ಪ್ರತಿ ಮಕ್ಕಳು ದೈಹಿಕವಾಗಿ ಕ್ರಿಯಾಶೀಲರಾಗಿರಬೇಕು ಮತ್ತು ಕೆಲಸ ಮಾಡಿ ಶ್ರಮ ಬೆವರು ಸುರಿಸಿದಾಗ ಪ್ರಕಾಶಮಾನವಾಗಿ ಕಾಣುತ್ತೀರಿ ಎಂಬ ಗುಟ್ಟನ್ನೂ ಹೇಳಿದ್ದಾರೆ.
  ವಯಸ್ಸಾದರೂ ನಿಮ್ಮ ಚರ್ಮ ಹೊಳಪಾಗಿರಲು ಕಾರಣವೇನು ಎಂದು ಕೆಲ ವರ್ಷಗಳ ಹಿಂದೆ ಯಾರೋ ಮೋದಿಗೆ ಕೇಳಿದ್ದರಂತೆ. ಆಗ ಮೋದಿಗೆ ಹೀಗೆ ಹೇಳಿದ್ದರಂತೆ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ ಮತ್ತು ಇದರಿಂದ ನಾನು ಸಾಕಷ್ಟು ಬೆವರುತ್ತೇನೆ. ಅದರೊಂದಿಗೆ ನಾನು ಮುಖವನ್ನು ಮಸಾಜ್ ಮಾಡಿಕೊಳ್ಳುತ್ತೇನೆ. ಇದು ನನ್ನ ಚರ್ಮಕ್ಕೆ ಹೊಳಪು ನೀಡುತ್ತದೆ. ಹೀಗಂತ ಮೋದಿ ತಮ್ಮ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

 

%d bloggers like this: