You cannot copy content of this page.
. . .

ಮಹಾಪೌರರ ಆಯ್ಕೆಯಲ್ಲಿ ನಾನು ತಟಸ್ಥ: ಜಿಟಿಡಿ ಸ್ಪಷ್ಟನೆ

  ಮೈಸೂರು ಮಹಾನಗರ ಪಾಲಿಕೆಯ ಮೇಯರ್‍ ಆಯ್ಕೆಯಲ್ಲಿ ನಾನು ತಟಸ್ಥನಾಗಿರುತ್ತೇನೆ. ಆಯ್ಕೆ ವಿಚಾರದಲ್ಲಿ ನನ್ನ ಮಾತು ನಡೆಯುವುದಿಲ್ಲ ಎಂಬುದು ನನಗೆ ತಿಳಿದಿದೆ. ಶಾಸಕ ಸಾ.ರಾ.ಮಹೇಶ್ ಅವರೇ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
  ಮಹಾಪೌರರ ಆಯ್ಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡರು, ಮಹಾಪೌರರ ಚುನಾವಣೆಯಲ್ಲಿ ನಾನೂ ಕೂಡ ಭಾಗವಹಿಸುತ್ತೇನೆ. ಪಕ್ಷ ಸೂಚಿಸಿದ ಅಭ್ಯರ್ಥಿಗೆ ಮತ ನೀಡುತ್ತೇನೆ. ಈ ವಿಚಾರದಲ್ಲಿ ಯಾವುದೇ ಗೇಮ್‌ ಪ್ಲಾನ್‌ಗಳಿಲ್ಲ. ಹಿಂದೆ ಒಂದು, ಮುಂದೆ ಒಂದು ರೀತಿಯಲ್ಲಿ ನಡೆದುಕೊಳ್ಳುವ ಗೇಮ್ ಪ್ಲಾನ್ ಮಾಡುವ ಕ್ರಿಮಿನಲ್ ಮೈಂಡ್ ನನ್ನದಲ್ಲ ಎಂದರು.
  ನಾನು ಉಸ್ತುವಾರಿ ಸಚಿವನಾಗಿದ್ದಾಗ ಜಾ.ದಳ ನಗರಾಧ್ಯಕ್ಷ ಚಲುವೇಗೌಡರನ್ನು ಮಹಾಪೌರರನ್ನಾಗಿ ಮಾಡಿ ಎಂದು ಹೇಳಿದ್ದೆ. ಆದರೆ ರವಿಕುಮಾರ್‌ ರನ್ನು ಆಯ್ಕೆ ಮಾಡಿದರು. ವಿಶ್ವಕರ್ಮ ಸಮಾಜದ ರಮೇಶ್(ರಮಣಿ)ರನ್ನು ಮಹಾಪೌರರ ಸ್ಥಾನಕ್ಕೆ ಆಯ್ಕೆ ಮಾಡಿ ಎಂದು ಹೇಳಿದ್ದೆ. ಆಗಲೂ ಮಾಡಲಿಲ್ಲ ಎಂದರು.
 ಹೀಗಾಗಿ ಮಹಾಪೌರರ ಆಯ್ಕೆ ವಿಚಾರದಲ್ಲಿ ನಮ್ಮದೇನೂ ನಡೆಯುವುದಿಲ್ಲ. ಈಗಲೂ ಹಾಗೆ ನಮ್ಮ ಪಕ್ಷದ ವರಿಷ್ಠರು ಸೂಚಿಸುವ ಅಭ್ಯರ್ಥಿಗೆ ಓಟು ಹಾಕುತ್ತೇನೆ ಎಂದು ಜಿಟಿಡಿ ಸ್ಪಷ್ಟಪಡಿಸಿದರು. ಇತ್ತಿಚೆಗೆ ಸಾರಾ ಮಹೇಶ್‍ ಅವರು ಮಾತನಾಡಿ, ಜಿಟಿಡಿಯವರು ಯಾವ ಹೆಸರು ಸೂಚಿಸಿದರೆ ಅವರನ್ನು ಮೇಯರ್‍ ಮಾಡುತ್ತೇವೆ ಎಂದು ಹೇಳಿದ್ದರು.

 

%d bloggers like this: