You cannot copy content of this page.
. . .

 ಕನಸಿನ ಮನೆಯನ್ನು ಉಳಿಸಿಕೊಳ್ಳಲು ಮಂಡ್ಯದ ವ್ಯಕ್ತಿಯೊಬ್ಬರು ಮನೆಯನ್ನು ಲಿಫ್ಟ್‍ ಮಾಡಿ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ 20 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದಾರೆ.

   ಕೋಣನಹಳ್ಳಿಯ ಮಲ್ಲಿಕಾರ್ಜುನ್ 5 ವರ್ಷದ ಹಿಂದೆ ವಿ.ಸಿ.ಫಾರಂ ಮಾರ್ಗದಲ್ಲಿ 36 ಚದರ ಅಡಿಯಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದಾರೆ. ಆದರೆ ಇತ್ತೀಚೆಗೆ ಆರಂಭವಾದ ಬೈಪಾಸ್ ರಸ್ತೆ ಕಾಮಗಾರಿಯಿಂದಾಗಿ ಮನೆಯ ಅರ್ಧ ಭಾಗವನ್ನೇ ಒಡೆಯಬೇಕಾದ ಪರಿಸ್ಥಿತಿ ಬಂದಿತ್ತು. ಆದರೆ ಇಷ್ಟಪಟ್ಟು ಕಟ್ಟಿದ ಮನೆ ಒಡೆಯಲು ಮನಸ್ಸಿಲ್ಲದೆ ಮಾಲೀಕ ಮಲ್ಲಿಕಾರ್ಜುನ್, ಲಿಫ್ಟಿಂಗ್ ವಿಧಾನದ ಮೂಲಕ ಮನೆಯನ್ನು ಸ‍್ಥಳಾಂತರಿಸಲು ಹರಿಯಾಣ ಮೂಲದ ಕಂಪನಿ ಮೊರೆ ಹೋಗಿದ್ದಾರೆ.

 20 ಲಕ್ಷ ರೂ. ವೆಚ್ಚದಲ್ಲಿ ಮನೆ ಲಿಫ್ಟಿಂಗ್ ಮಾಡಲು ಒಪ್ಪಂದವಾಗಿದೆ. ಈಗಾಗಲೇ 2 ತಿಂಗಳಿನಲ್ಲಿ ಮನೆಯನ್ನು 3 ಅಡಿ ಎತ್ತರಿಸಲಾಗಿದೆ. ಇನ್ನು 15 ದಿನದಲ್ಲಿ ಕಾಂಪೌಂಡ್ ಹೊರತುಪಡಿಸಿ 45 ಅಡಿ ಹಿಂದಕ್ಕೆ ಮತ್ತು 20 ಅಡಿ ಪಕ್ಕಕ್ಕೆ ಮನೆಯನ್ನು ಲಿಫ್ಟ್ ಮಾಡಲಾಗುತ್ತದೆ.

 

%d bloggers like this: