You cannot copy content of this page.
. . .

    ಮೈಶುಗರ್‍ ಸಕ್ಕರೆ ಕಾರ್ಖಾನೆ ಪುನಾರಂಭ ಸಂಬಂಧ ನಡೆದ ಸಭೆ ವೇಳೆ ರೈತರು ಗದ್ದಲ ನಡೆಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಮೈಶುಗರ್‍ ಸರ್ಕಾರಿ ಸಕ್ಕರೆ ಕಾರ್ಖಾನೆ ಪುನಾರಂಭದ ಸಂಬಂಧ ನಿನ್ನೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಕ್ಕರೆ ಸಚಿವ ಸಿ.ಟಿ.ರವಿಯವರು ಕಾರ್ಖಾನೆಗೆ ಭೇಟಿ ನಿಡಿದ್ದರು. ಈ ವೇಳೆ ಕೆಲ ರೈತರು ಒಳಗಡೆ ಬಿಡಲಿಲ್ಲ ಎಂಬ ಕಾರಣಕ್ಕೆ ಗಲಾಟೆ ಮಾಡಿದ್ದಾರೆ. ಈ ವೇಳೆ ಸಚಿವರು ಹಾಗೂ ಪೊಲೀಸರು ರೈತರನ್ನು ಸಮಾಧಾನಪಡಿಸಿದ್ದಾರೆ.

  ಮಂಡ್ಯದ ಮೈಶುಗರ್ ಅತಿಥಿ ಗೃಹದ ಮೀಟಿಂಗ್ ಹಾಲ್ ನಲ್ಲಿ ಸಿ.ಟಿ.ರವಿ ನೇತೃತ್ವದಲ್ಲಿ ರೈತ ಮುಖಂಡರ ಸಭೆ ನಡೆಸಲಾಯಿತು. ಈ ವೇಳೆ ಸಂಸದೆ ಸುಮಲತಾ ಸೇರಿದಂತೆ ಜಿಲ್ಲೆಯ ಹಲವು ಜನಪ್ರತಿನಿಧಿಗಳು ಕೂಡಾ ಹಾಜರಿದ್ದರು. ಆದರೆ ಬರೀ ರೈತ ಮುಖಂಡರನ್ನಷ್ಟೇ ಕರೆದು ಸಭೆ ಮಾಡುತ್ತಿದ್ದೀರಿ, ನಾವೂ ಇರುವ ಕೆಲಸ ಬಿಟ್ಟು ಬಂದಿದ್ದೇವೆ. ನಮ್ಮನ್ನೂ ಒಳಗೆ ಬಿಡಿ ಎಂದು ಕಬ್ಬಿನ ಬೆಳೆಗಾರರು ಆಗ್ರಹಿಸಿದರು. ಈ ವೇಳೆ ರೈತರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪೊಲೀಸರು ಹಾಗೂ ಸಚಿವರು ರೈತರನ್ನು ಸಮಾಧಾಪಡಿಸಿದರು.

2020 ಜೂನ್‍ಗೆ ಕಾರ್ಖಾನೆ ಶುರು

 ಇದೇ ವೇಳೆ ಮಾತನಾಡಿದ ಸಚಿವ ಸಿ.ಟಿ.ರವಿ 2020ರ ಜೂನ್ ನಲ್ಲಿ ಮೈಶುಗರ್ ಕಾರ್ಖಾನೆ ಪುನಾರಂಭ ಮಾಡುತ್ತೇವೆ. ಸರ್ಕಾರದಿಂದಲೇ ಕಾರ್ಖಾನೆ ಮುನ್ನಡೆಸಬೇಕೆ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ತೆರೆಯಬೇಕೆ ಎಂಬುದರ ಕುರಿತು ಜನವರಿ ಅಂತ್ಯಕ್ಕೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

 

%d bloggers like this: