You cannot copy content of this page.
. . .

ದೇಶದ ಸಂಸ್ಕೃತಿ-ಸಾಧನೆಯ ಪ್ರತಿಬಿಂಬ; ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಸೋಮಣ್ಣ ಚಾಲನೆ

 ದೇಶದ ಸಂಸ್ಕೃತಿ-ಸಾಧನೆಯನ್ನು ಪ್ರತಿಬಿಂಬಿಸುವ ಫಲಪುಷ್ಪ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಸಾಂಸ್ಕೃತಿಕ ನಗರಿಯ ಅರಮನೆ ಅಂಗಳದಲ್ಲಿ ಬಗೆ ಬಗೆಯ ಮಾದರಿಯಲ್ಲಿ ಸಿಂಗಾರಗೊಂಡು ನಿಂತಿರುವ ಫಲಪುಷ್ಪಗಳು ನೋಡುಗರ ಕಣ್ಮನ ತಣಿಸುತ್ತಿದೆ.

 ಮಾಗಿ ಉತ್ಸವದ ಪ್ರಯುಕ್ತ ಮೈಸೂರಿನ ಅರಮನೆ ಆವರಣದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.

 ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ಉಪಮಹಾಪೌರ ಶಫೀ ಅಹಮ್ಮದ್, ಜಿಲ್ಲಾಧಿಕಾರಿ ಅಭಿರಾಮ್ ಶಂಕರ್, ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಹಲವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಯಾವ್ಯಾವ ಮಾದರಿಯ ಫಲಪುಷ್ಪ ಪ್ರದರ್ಶನ?

 ಅರಮನೆಯ ತ್ರಿನೇಶ್ವರ ಶಿವಲಿಂಗ, ಚಂದ್ರಯಾನ-೨, ಭಾರತೀಯ ವಾಯುಸೇನೆ, ಭಾರತೀಯ ನೌಕಪಡೆ, ಅರಮನೆ, ಸಿಂಹಾಸನ, ಸೆಲ್ಫಿ ವಲಯ, ಶಿವನರ್ತನ, ತಪಸ್ಸಿಗೆ ಕುಳಿತ ಬುದ್ಧ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಥದಲ್ಲಿ ಪಯಣ, ಶ್ರೀಕಂಠದತ್ತ ಒಡೆಯರ್, ಪೊಲೀಸ್ ಬ್ಯಾಂಡ್ ಮೆರವಣೆಗೆ, ಛಾಯಾಚಿತ್ರ ಪ್ರದರ್ಶನ, ಸಾಂಪ್ರದಾಯಿಕ ಬೊಂಬೆಗಳ ಪ್ರದರ್ಶನ, ಅರಮನೆ ಫಲಪುಷ್ಪ ಪ್ರದರ್ಶನ, ಪುಷ್ಪ ಪ್ರದರ್ಶನ ಪ್ರವಾಸಿಗರನ್ನು ತನ್ನತ ಸೆಳೆಯುತ್ತಿದೆ.

 

%d bloggers like this: