You cannot copy content of this page.
. . .

ಮಡಿಕೇರಿಯ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರವೊಂದರಲ್ಲಿ ಹಣ ತುಂಬುವವರು ಮಾಡಿದ ಎಡವಟ್ಟಿನಿಂದ ಗ್ರಾಹಕರು ಭರಪೂರ ಲಾಭ ಪಡೆದಿದ್ದಾರೆ. ಎಟಿಎಂ ಯಂತ್ರದಲ್ಲಿ 500 ರೂ. ನಮೂದು ಮಾಡಿದರೆ 2500 ರೂಪಾಯಿ ಬಂದಿದ್ದು ಗ್ರಾಹಕರನ್ನು ಅಚ್ಚರಿಗೊಳಿಸಿತ್ತು. ಈ ಎಡವಟ್ಟು ಬ್ಯಾಂಕ್‌ ಸಿಬಂದಿಗೆ ತಿಳಿಯುವಷ್ಟರಲ್ಲಿ 1.50 ಲಕ್ಷ ರೂ. ಸೋರಿಕೆ ಆಗಿತ್ತು.

  ಹಣ ತುಂಬುವ ಸಿಬ್ಬಂದಿ 100 ರೂಪಾಯಿ ನೋಟುಗಳನ್ನು ತುಂಬುವ ಟ್ರೇನಲ್ಲಿ 500 ರೂಪಾಯಿ ನೋಟುಗಳನ್ನು ತುಂಬಿದ್ದರಿಂದ ಈ ಅವಾಂತರವಾಗಿತ್ತು. 2019ರ ಡಿಸೆಂಬರ್‍ 30 ರಂದು ಈ ಘಟನೆ ನಡೆದಿದ್ದು, ತಡವಾಗಿ ವಿಚಾರ ಬೆಳಕಿಗೆ ಬಂದಿದೆ..

  ಬ್ಯಾಂಕ್‌ ಸಿಬಂದಿ ಹೆಚ್ಚುವರಿಯಾಗಿ ಹಣ ಪಡೆದ ಗ್ರಾಹಕರನ್ನು ಸಂಪರ್ಕಿಸಿ ಹಣ ಹಿಂದಿರುಗಿಸುವಂತೆ ಮನವಿ ಮಾಡಿದ್ದರು. ಆದರೆ ಕೆಲವರು ಹಣ ವಾಪಸ್‍ ಕೊಡಲು ಹಿಂದೇಟು ಹಾಕಿದ್ದರಿಂದ ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ. ಪೊಲೀಸರ ಕರೆಗೆ ಬೆಚ್ಚಿದ ಉಳಿದ ಗ್ರಾಹಕರೆಲ್ಲರೂ ಬ್ಯಾಂಕ್‌ಗೆ ತೆರಳಿ ಹಣ ವಾಪಸ್‌ ಮಾಡಿದ್ದಾರೆ. ಈ ಮೂಲಕ ಎಟಿಎಂನಿಂದ ಹೆಚ್ಚುವರಿಯಾಗಿ ಗ್ರಾಹಕರ ಕೈಸೇರಿದ 1.50 ಲಕ್ಷ ರೂ. ಸುರಕ್ಷಿತವಾಗಿ ಬ್ಯಾಂಕ್‌ಗೆ ಜಮೆಯಾಗಿದೆ.

 

%d bloggers like this: